ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆ ಕೊಡಿ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚಮಾಡಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಚೆಗೆ ಸಮಾವೇಶ ಏರ್ಪಡಿಸಿತ್ತು. ಆದರೆ, ಸಿರಿಧಾನ್ಯಗಳನ್ನು ಬೆಳೆದ ರೈತರಿಂದ ಉತ್ಪನ್ನವನ್ನು ಖರೀದಿಸಲು ಸರ್ಕಾರದ ನೆರವಿಲ್ಲದೆ ರೈತರು ಅಧೋಗತಿಗೆ ಇಳಿದಿದ್ದಾರೆ.

ಕೇಂದ್ರ ಸರ್ಕಾರವು ರಾಗಿ ಮತ್ತು ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದೆ. ಆದರೆ ನವಣೆ, ಸಾಮೆ, ಹಾರಕ, ಬರಗು ಹಾಗೂ ಉದ್ಲು ಬೆಳೆಗಳಿಗೆ ಯಾವ ಸರ್ಕಾರವೂ ಬೆಂಬಲ ಬೆಲೆ ಘೋಷಿಸಿಲ್ಲ. ದಾವಣಗೆರೆ ಸಾವಯವ ಮಾರುಕಟ್ಟೆ ಫೇಡರೇಷನ್‌ನವರು (ಕ್ವಿಂಟಲ್‌ಗೆ) ನವಣೆಗೆ ₹ 1600, ಸಾಮೆಗೆ ₹ 2500, ಹಾರಕಕ್ಕೆ ₹ 2400, ಬರಗುಗೆ ₹ 2700, ಕೊರಲೆಗೆ ₹ 4500 ಹಾಗೂ ಉದ್ಲುಗೆ ₹ 2500 ಬೆಲೆ ಘೋಷಿಸಿದ್ದಾರೆ.

ಆದರೆ ಮಾಲ್‌ಗಳಲ್ಲಿ ಈ ಸಿರಿಧಾನ್ಯಗಳು ಕ್ವಿಂಟಲ್‌ಗೆ ₹ 6000 ದಿಂದ ₹ 10,000 ಬೆಲೆಗೆ ಮಾರಾಟವಾಗುತ್ತಿವೆ. ಸಿರಿಧಾನ್ಯಗಳನ್ನು ಬೆಳೆದ ರೈತರ ನೆರವಿಗೆ ಸರ್ಕಾರ ಈಗಲಾದರೂ ಧಾವಿಸಿ ಸೂಕ್ತ ಬೆಲೆಯನ್ನು ಕೊಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT