ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಮಹಿಳಾ ಬೋಗಿಗಳಿಗೆ ಸುಮಲತಾ ಚಾಲನೆ

Last Updated 31 ಅಕ್ಟೋಬರ್ 2019, 13:56 IST
ಅಕ್ಷರ ಗಾತ್ರ

ಮಂಡ್ಯ: ಕೆಲಸಕ್ಕಾಗಿ ಬೆಂಗಳೂರಿಗೆ ತೆರಳುವ ಮಹಿಳೆಯರ ಅನುಕೂಲಕ್ಕಾಗಿ ಮೈಸೂರು–ಬೆಂಗಳೂರು ನಡುವೆ ಓಡಾಡುವ ಮೆಮು ರೈಲಿನ ಎರಡು ವಿಶೇಷ ಮಹಿಳಾ ಬೋಗಿಗಳಿಗೆ ಸಂಸದೆ ಎ.ಸುಮಲತಾ ಗುರುವಾರ ಚಾಲನೆ ನೀಡಿದರು.

ನಗರದ ರೈಲು ನಿಲ್ದಾಣದಲ್ಲಿ ಬೋಗಿಗಳಗೆ ( ರೈಲು ಸಂಖ್ಯೆ 66551) ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಸಿದ್ಧ ಉಡುಪು ಕಾರ್ಖಾನೆ, ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವ ಸಾವಿರಾರು ಮಹಿಳೆಯರು ಜಿಲ್ಲೆಯಿಂದ ಬೆಂಗಳೂರಿಗೆ ತೆರಳುತ್ತಾರೆ. ಅವರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಮಹಿಳೆಯರಿಗೆ ಎರಡು ಬೋಗಿ ಅಳವಡಿಸಲಾಗಿದೆ. ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರಲ್ಲಿ ಈ ಕುರಿತು ಮನವಿ ಸಲ್ಲಿಸಿದ್ದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಇನ್ನೂ ಹೆಚ್ಚಿನ ಬೋಗಿ ಅಳವಡಿಸಲಾಗುವುದು’ ಎಂದರು.

ಗೊಂದಲ: ರೈಲು ಮಂಡ್ಯ ನಗರಕ್ಕೆ 11.08ಕ್ಕೆ ಬರಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ಅರ್ಧ ಗಂಟೆ ತಡವಾಗಿ ಬಂತು. ಅವರು 11.40ರವರೆಗೂ ನಿಲ್ದಾಣದ ಕಚೇರಿ ಕೊಠಡಿಯಲ್ಲಿ ಕಾಯುತ್ತಿದ್ದರು. ಬೆಂಗಳೂರಿನಿಂದ ಬಂದ ರೈಲು ಉದ್ಘಾಟನೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ನಿಲ್ಲದೆ ಸ್ವಲ್ಪ ದೂರದಲ್ಲೇ ನಿಂತಿತು. ನಂತರ ರೈಲ್ವೆ ಇಲಾಖೆ ಅಧಿಕಾರಿಗಳನ್ನು ಸುಮಲತಾ ಇರುವಲ್ಲಿಗೆ ಬರುವಂತೆ ಲೋಕೊಪೈಲಟ್‌ಗೆ ಸೂಚನೆ ಕೊಟ್ಟರು. ನಂತರ ರೈಲು ಮುಂದೆ ಬಂತು.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದು ಸುಮಲತಾ ಅವರು ರೈಲನ್ನು ತಾವಿರುವ ಜಾಗಕ್ಕೆ ಕರೆಸಿಕೊಂಡರು ಎಂಬ ಸುದ್ದಿ ಹರಿದಾಡಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT