ಶುಕ್ರವಾರ, ಜೂನ್ 5, 2020
27 °C

ರಾಜಕೀಯ ಜಿದ್ದಾಜಿದ್ದಿಯಲ್ಲಿ ‘ಪಂಚತಂತ್ರ’ ವಿಶ್ರಾಂತಿ: ಯೋಗರಾಜ್‌ ಭಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಪಂಚತಂತ್ರ ಸಿನಿಮಾ ವೃದ್ಧರು ಹಾಗೂ ಯುವಕರ ನಡುವಿನ ಅಂತರ ಅನಾವರಣಗೊಳಿಸುತ್ತದೆ. ಮನಸ್ಸಿಗೆ ಮಜಾ ಹಾಗೂ ಮುಖದಲ್ಲಿ ನಗು ಮೂಡಿಸುವ ಚಿತ್ರವಾಗಿದೆ. ರಾಜಕೀಯದ ಜಿದ್ದಾಜಿದ್ದಿ ನಡುವೆ ವಿಶ್ರಾಂತಿ ನೀಡುವ ಸಿನಿಮಾವಾಗಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯ ಸಿನಿಮಾ ನಟರ ಚಿತ್ರವನ್ನು ಎಲ್ಲರೂ ಬಂದು ನೋಡುತ್ತಾರೆ. ಆದರೆ ಹೊಸಬರ ಸಿನಿಮಾ ನೋಡುವಂತೆ ನಾವೇ ಜನರ ಬಳಿಗೆ ಹೋಗಬೇಕಿದೆ. ಜೊತೆಗೆ ಹೊಸಬರ ನಟನೆಯ ನಡುವೆಯೂ ರಾಜಕೀಯ ರಣಾಂಗಣದಲ್ಲಿ ಯಾರಿಗೆ ಮತ ಹಾಕಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲು ನೆರವಾಗಲಿದೆ. 60ರ ಹಿರಿಯರು ಹಾಗೂ 20ರ ಯುವಕರ ನಡುವೆ ನಡೆಯುವ ಸಂಘರ್ಷವನ್ನು ಮನಮೋಹಕವಾಗಿ ಕಟ್ಟಿಕೊಡಲಾಗಿದೆ’ ಎಂದರು.

‘ನಾನು ರಾಜಕೀಯ ನಿರ್ಲಿಪ್ತ ಆಗಿದ್ದು, ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶಗಳಿಲ್ಲ. ರಾಜಕೀಯ ಪ್ರಶ್ನೆ ನಮಗೆ
ಅನ್ವಯಿಸುವುದಿಲ್ಲ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಇಬ್ಬರೂ ಅಭ್ಯರ್ಥಿಗಳ ಮನೆಯಲ್ಲಿ ಊಟ ಮಾಡಿದ್ದು, ಜನರ ತೀರ್ಮಾನವೇ ಅಂತಿಮವಾಗುತ್ತದೆ. ಡಬ್ಬಿಂಗ್ ವಿಚಾರದಲ್ಲಿ ನಾನು ತಟಸ್ಥವಾಗಿದ್ದೇನೆ. ಗುಣಮಟ್ಟದ ಸಿನಿಮಾಗಳು ಯಾವ ಭಾಷೆಯಿಂದ ಬಂದರೂ ಜನರು ಸ್ವೀಕಾರ ಮಾಡುತ್ತಾರೆ’ ಎಂದು ಹೇಳಿದರು.

ಪಂಚತಂತ್ರ ಚಿತ್ರದ ನಿರ್ಮಾಪಕ ಹರಿಪ್ರಸಾದ್, ನಾಯಕ ವಿಹಾನ್‌ಗೌಡ, ನಾಯಕಿ ಸೋನಲ್ ಮಂಟೇರಿಯೋ, ರೇಸ್ ಮಾಸ್ಟರ್ ಮನೀಷ್, ರಾಜು ಸೂನಗಹಳ್ಳಿ, ಹೇಮಂತ್‌ಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು