ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಉಳಿವಿಗೆ ಅರಿವು ಮೂಡಿಸಿ

ಸಿಂಧುಶ್ರೀ ಕಲಾ ಸಂಸ್ಥೆಯಿಂದ ‘ಹಾಡಾನ ಬನ್ನಿ ದನಿಯೆತ್ತಿ’, ಸಾಧಕರಿಗೆ ಸನ್ಮಾನ ಕಾರ್ಯಕ್ರಮ
Last Updated 23 ಮಾರ್ಚ್ 2017, 6:04 IST
ಅಕ್ಷರ ಗಾತ್ರ

ಮಂಡ್ಯ: ‘ಜನಪದ’ ಕಲೆ ಉಳಿವಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ ಸಲಹೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಸಿಂಧುಶ್ರೀ ಕಲಾ ಸಂಸ್ಥೆಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಹಾಡಾನ ಬನ್ನಿ ದನಿಯೆತ್ತಿ’ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪದ ಸಂಸ್ಕೃತಿ ಮರೆತು ಆಧುನಿಕ ಜೀವನ ಶೈಲಿಗೆ ಹೋಗುತ್ತಿದ್ದೇವೆ. ಜೀವನದ ಸೊಗಡನ್ನು ಮರಳಿಸುವ ಶಕ್ತಿ ಜನಪದ ಸಂಸ್ಕೃತಿಗೆ ಮಾತ್ರ ಇದೆ ಎಂಬುದನ್ನು ಯಾರೂ ಮರೆಯಬಾರದು. ಜನಪದ ಕತೆ ಹಾಗೂ ಹಾಡುಗಳು ಇಂದಿಗೂ ಪ್ರಸ್ತುತ ಆಗಿವೆ. ಅವುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ಕಲಾವಿದರು ಜೀವನ ನಡೆಸುವುದು ಕಷ್ಟಕರವಾಗಿದೆ. ಆದರೂ, ಸಹ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಜಿ. ಮಾದೇಗೌಡ ಅವರು, ಜನಪದಕ್ಕೆ ಅದರದೇ ಆದ ಇತಿಹಾಸ ಇದೆ. ಹಿಂದಿನಿಂದಲೂ ಬಂದ ಹಲವು ಕಲೆಗಳು ಅಳಿವಿನಂಚಿನಲ್ಲಿದೆ. ಅದರಲ್ಲಿ ಜನಪದವೂ ಒಂದು ಇವೆಲ್ಲವನ್ನೂ ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಕಸಾಪ ಬೆಂಗಳೂರು ನಗರದ ಘಟಕದ ಅಧ್ಯಕ್ಷ ಮಾಯಣ್ಣ ಮಾತನಾಡಿ, ಕನ್ನಡ ಸಾಹಿತಿಗಳ ಕೃತಿಗಳನ್ನು ಮನೆಯಲ್ಲಿಡಿ. ಆಗಾಗ ಅವುಗಳನ್ನು ಓದುವ ಮೂಲಕ ಕನ್ನಡ ಜ್ಞಾನ ಹೆಚ್ಚಿಸಿಕೊಳ್ಳಿ ಎಂದರು.

ಸಾಹಿತಿ ಜಿ.ಟಿ. ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್‌ ಸಂಸ್ಥೆಯ ಕೆ.ಟಿ. ಹನುಮಂತು, ಮುಖ್ಯ ಶಿಕ್ಷಕ ಶಿವರಾಮು, ಗಾಯಕರಾದ ಗುರುಮೂರ್ತಿ, ಎಚ್‌.ಕೆ. ಚಂದ್ರಹಾಸ್‌, ಹಾಸ್ಯ ಕಲಾವಿದ ಮಂಡ್ಯ ಸತ್ಯ, ಸಿಂಧುಶ್ರೀ ಕಲಾ ಸಂಸ್ಥೆ ಅಧ್ಯಕ್ಷ ಸಾದೊಳಲು ಶಿವಣ್ಣ  ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಜಾನಪದ, ಭಾವ, ಪರಿಸರ, ತತ್ವಪದ, ಗೀಗಿ ಪದ, ಲಾವಣಿ, ಕಂಸಾಳೆ ಹಾಡುಗಳನ್ನು ಗಾಯಕರು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT