ಪವಾಡ ಪುರುಷ ಅಡಿವೆಪ್ಪ ಮಹಾರಾಜರು..!

7

ಪವಾಡ ಪುರುಷ ಅಡಿವೆಪ್ಪ ಮಹಾರಾಜರು..!

Published:
Updated:
Deccan Herald

ಮನುಷ್ಯನ ಜೀವನ ಸಾರ್ಥಕಕ್ಕೆ ಜ್ಞಾನ, ಭಕ್ತಿ ಅತ್ಯಂತ ಅವಶ್ಯಕ. ಭಕ್ತಿ, ಜ್ಞಾನದ ಮೂಲವೇ ಗುರು. ಅಂತಹ ಗುರುವಿನ ಮಾರ್ಗದರ್ಶನದಲ್ಲಿ ಬೆಳೆದು, ನಡೆದಾಡುವ ದೈವನಾದವರು ಕಾಮನಕೇರಿ ಬೂದಿಹಾಳದ ಗುರುಸಿದ್ಧ ಪುರುಷ ಅಡಿವೆಪ್ಪ ಮಹಾರಾಜರು.

ಬಸವನ ಬಾಗೇವಾಡಿ ತಾಲ್ಲೂಕು ಕಾಮನಕೇರಿ ಬೂದಿಹಾಳ ಗ್ರಾಮದಲ್ಲಿ 1927ರಲ್ಲಿ ಗದಿಗೆಪ್ಪ, ಶಂಕ್ರೆಮ್ಮ ದಂಪತಿ ಉದರದಲ್ಲಿ ಇವರು ಜನ್ಮ ತಾಳಿದರು. ಬಾಲ್ಯದಲ್ಲಿ ಕುರಿ ಕಾಯುವ ಕಾಯಕದಲ್ಲಿ ತೊಡಗಿದ್ದ (8 ನೇ ವಯಸ್ಸಿನಲ್ಲಿ) ಅಜ್ಜರಿಗೆ ಕಮದಾಳ ಕರಿಸಿದ್ಧನ ಸಾಕ್ಷಾತ್‌ ದರ್ಶನವಾಗುತ್ತದೆ. ಅಂದಿನಿಂದ ಅವರ ಹಾವಭಾವ ಕೇವಲ ಡೊಳ್ಳು ಬಾರಿಸುವ ರೀತಿಯಲ್ಲಿ ಕುಣಿಯ ತೊಡಗಿದನ್ನು ಕಂಡು, ಮನೆಯವರು ಗಾಬರಿಗೊಳ್ಳುತ್ತಾರೆ. ಆಗ ನಾನು ಕಮದಾಳದ ಕರಿಸಿದ್ಧನಿದ್ದೇನೆ ಎಂದು ನುಡಿಯುತ್ತಾರೆ.

ಕೆಲ ವರ್ಷಗಳ ನಂತರ ಬಸವನಬಾಗೇವಾಡಿ ತಾಲ್ಲೂಕು ಕಮದಾಳದ ಕರಿದೇವರ ಪಟ್ಟದ ಆಳಾಗಿ ದುಡಿದು, 13 ದಿನದ ಮಗುವನ್ನು ಮಾತನಾಡಿಸಿದ ಸಿದ್ದಪ್ಪ ಮುತ್ಯಾರ ತರುವಾಯ ಮಠಕ್ಕೆ ಯಾರು ? ಎಂದು ಭಕ್ತಕೋಟಿ ಕೇಳಿದಾಗ; ಮುಂದೆ ಡೋಣಿ ನಾಡಿನಲ್ಲಿ ಕರಿದೇವರ ಆಳ ಹುಟ್ಟಿ ಬರ್ತೈತಿ. ಅವರ ನಾಮ ಅಡಿವೆಪ್ಪ ಎಂದೈತಿ, ಅವ ಬಂದು ಕೃಷ್ಣೆ ನದಿಯಿಂದ ಭೀಮಾ ನದಿವರೆಗೆ ನಾಡಿನ ಉದ್ದಗಲಕ್ಕ ಮಠ ಬೆಳಿಸ್ತಾನ. ಬಡವನಿಗೆ ಭಾಗ್ಯ, ಬಂಜೆಗೆ ಮಕ್ಕಳು, ಮೂಖರಿಗೆ ಮಾತು, ಅಂಧರಿಗೆ ಕಣ್ಣು ಕೊಡುವ ಶಿವನಾಗಿ ಬರ್ತಾನ ಅಂಥ ಹೇಳಿ ಜೀವ ತ್ಯಜಿಸಿದ್ದರು ಎಂದು ಅಜ್ಜರನ್ನು ಹತ್ತಿರದಿಂದ ಬಲ್ಲ ಭಕ್ತರಾದ ಬಸಪ್ಪ ಹಡಪದ, ಶೇಖಪ್ಪ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿದ್ದಪ್ಪ ಮುತ್ಯಾ ನುಡಿದಂತೆ ಅಡಿವೆಪ್ಪ ಮಹಾರಾಜರು ಕಮದಾಳ ಮಠದ ಪಟ್ಟಾದ ಆಳಾಗಿ, ಹಾವು ಕಡಿದವರಿಗೆ ಭಂಡಾರ ಹಚ್ಚಿ ಬದುಕಿಸಿದರು. ವಿದ್ಯುತ್ ಆಘಾತದಿಂದ ಸತ್ತ ಮಗನನ್ನು ಬದುಕಿಸಿದರು. ಸತ್ತು 12 ವರ್ಷವಾಗಿದ್ದ ವ್ಯಕ್ತಿಯನ್ನು ಬದುಕಿಸಿ, ಆತನ ಮಗನಿಗೆ ತೋರಿಸಿ ಗದ್ದುಗೆ ಕಟ್ಟಿಸಿದರು. ಮಹಾರಾಜರಿಗೆ ಹಲ ಬಾರಿ ನಾಗ ಸರ್ಪ ಕಚ್ಚಿದರೂ ಏನೂ ಆಗಿರಲಿಲ್ಲ. ಎರಡು ದಶಕಗಳಿಂದ ನಿತ್ಯ ಒಮ್ಮೆ ಆಹಾರ ಸೇವಿಸಿ, ತಮ್ಮ 91ನೇ ವಯಸ್ಸಿನಲ್ಲಿ ತ್ರಿಕಾಲ ಪೂಜಾ ನಿಷ್ಠರಾಗಿದ್ದಾರೆ’ ಎಂದು ಅವರು ಹೇಳಿದರು.

‘ದೇಶದ ಹಾಗೂ ಜಗತ್ತಿನ ಭವಿಷ್ಯವಾಣಿಯನ್ನು ಪ್ರತಿ ವರ್ಷ ಯುಗಾದಿ ಹಬ್ಬದ ದಿನ ಅಡಿವೆಪ್ಪ ಮಹಾರಾಜರು ನುಡಿಯುತ್ತಾರೆ. ಅವರು ನುಡಿದಂತೆ ಜಗತ್ತು ನಡೆದಿದೆ ಎಂಬುದು ಜನರ ನಂಬಿಕೆ. 9.9.1999ಕ್ಕೆ ಪ್ರಳಯ ಆಗಲಿದೆ ಎಂದು ಕೆಲವರು ಪುಕಾರು ಎಬ್ಬಿಸಿದ್ದರು. ಆಗ ಅಡಿವೆಪ್ಪ ಅಜ್ಜರು ಏನು ಆಗುವುದಿಲ್ಲ. ಧನಿಕರು, ರೈತರಿಗೆ ಮಳಿ–ಬೆಳಿ ಚಲೋ ಆಗತೈತಿ ಅಂದಿದ್ದರು. ಅವರು ನುಡಿದಂತೆ ಅವಘಡ ಸಂಭವಿಸಲಿಲ್ಲ’ ಎನ್ನುತ್ತಾರೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕು ಬೀರಕಬ್ಬಿಯ ರಾಮಣ್ಣ ಪೂಜಾರಿ.

‘ಸಂಕಷ್ಟ ಹೇಳಿಕೊಂಡು ಬಂದ ಭಕ್ತರಿಗೆ ಪರಿಹಾರ ನೀಡುವ ಜತೆಗೆ ಕಮದಾಳದಲ್ಲಿ ಕರಿಸಿದ್ಧೇಶ್ವರರ ಭವ್ಯವಾದ ದೇವಸ್ಥಾನ ಕಟ್ಟಿಸಿದರು. ನಂತರ ರಾಜ್ಯದಲ್ಲಿಯೇ ಎತ್ತರದ ಮಹಲಗಂಭ (ದೀಪಗಂಭ)ವನ್ನು ಬೀರಕಬ್ಬಿಯಲ್ಲಿ ಸ್ಥಾಪಿಸಿದರು. ಶಿವಣಗಿ, ಕಾಮನಕೇರಿ ಬೂದಿಹಾಳ, ಇವಣಗಿ, ರಾಮನಹಟ್ಟಿ, ಕೊಪ್ಪ, ಗಿರಿಸಾಗರ ಸೇರಿದಂತೆ ಹತ್ತು ಹಲವು ಗ್ರಾಮಗಳಲ್ಲಿ ಮಸೀದಿ, ಮಂದಿರ ನಿರ್ಮಾಣಕ್ಕೆ ಕಾರಣಿಕರ್ತರಾಗುವ ಮೂಲಕ ಸರ್ವಧರ್ಮದ ಪರಿಪಾಲಕರಾಗಿದ್ದಾರೆ ಅಡಿವೆಪ್ಪ ಮಹಾರಾಜರು.

ಕಮದಾಳದಲ್ಲಿ ನಿರ್ಮಿಸಿದ್ದ ಭವ್ಯವಾದ ಮಠ ಮುಳುಗಡೆಯಾಗಿದ್ದರಿಂದ, ಅವರ ಅಪಾರ ಭಕ್ತರು ಅಜ್ಜರ ಸ್ವಂತ ಊರು ಕಾಮನಕೇರಿ ಬೂದಿಹಾಳದಲ್ಲಿ ಬೃಹತ್ ಮಠ ನಿರ್ಮಿಸಿರುವುದಾಗಿ ಗದಗ ಜಿಲ್ಲೆಯ ರೋಣದ ಬಸವರಾಜ ಜಗ್ಗಲ ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !