ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ: ಉತ್ತಮ ದರ್ಜೆ ತಂಬಾಕಿಗೆ ಕೆ.ಜಿ.ಗೆ ₹ 175

ಕಗ್ಗುಂಡಿ ಮಾರುಕಟ್ಟೆಯಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಆರಂಭ
Last Updated 30 ಸೆಪ್ಟೆಂಬರ್ 2020, 14:46 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 5 ರಲ್ಲಿ ಬುಧವಾರ ಹರಾಜು ಪ್ರಕ್ರಿಯೆ ಚಾಲನೆಗೊಂಡಿದ್ದು ಉತ್ತಮ ದರ್ಜೆ ತಂಬಾಕಿಗೆ ಕೆ.ಜಿ. ವೊಂದಕ್ಕೆ ₹ 175ರಂತೆ ಖರೀದಿ ಮಾಡಲಾಯಿತು.

ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ‘ಗುಣಮಟ್ಟದ ತಂಬಾಕಿಗೆ ಸೂಕ್ತ ಬೆಲೆ ನೀಡುವಂತೆ ತಂಬಾಕು ಖರೀದಿ ಕಂಪನಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಕಳೆದ ಬಾರಿ ಕೆಲವೊಂದು ವ್ಯತ್ಯಾಸಗಳಿಂದ ರೈತರಿಗೆ ಸೂಕ್ತ ಬೆಲೆ ಸಿಗದೇ ಗೊಂದಲಗಳು ಉಂಟಾಗಿದ್ದವು. ಆದರೆ, ಈ ಬಾರಿ ಗೊಂದಲಗಳಿಗೆ ತೆರೆ ಎಳೆಯಲು ತಂಬಾಕು ಖರೀದಿದಾರ ಕಂಪನಿಗಳ ಜೊತೆ ಚರ್ಚಿಸಿ ಸೂಕ್ತ ಬೆಲೆ ನೀಡುವಂತೆ ಸೂಚಿಸಲಾಗಿದೆ’ ಎಂದರು.

‘ಆರಂಭದ ದಿನ 5 ಕಂಪನಿಗಳು ಖರೀದಿಯಲ್ಲಿ ಭಾಗವಹಿಸಿದ್ದು, 9 ಬ್ಯಾಂಕ್‌ಗಳು ಖಾತ್ರಿ ನೀಡಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಗ್ಗೆ ಬೆಂಬಲ ಸೂಚಿಸಿವೆ. ಖರೀದಿದಾರರು ಬೆಲೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್‌ರಾಜೇ ಅರಸ್, ಬಿಜೆಪಿ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ಎಚ್.ಸಿ.ಬಸವರಾಜು, ಮೈಮುಲ್ ನಿರ್ದೇಶಕ ಪ್ರಸನ್ನ, ಕೆಡಬ್ಲ್ಯೂಎಸ್‌ಎಸ್‌ಬಿ ನಿರ್ದೇಶಕ ಆರ್.ಟಿ. ಸತೀಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಪ್ರಕಾಶ್ ಬಾಬುರಾವ್, ಹರಾಜು ಅಧೀಕ್ಷಕರಾದ ಬ್ರಿಜ್ ಭೂಷಣ್, ಮಂಜುನಾಥ್, ಕ್ಷೇತ್ರಪಾಲಕ ಸಂದೀಪ್, ಮುಖಂಡರಾದ ಬಿ.ವಿ.ಜವರೇಗೌಡ, ಪ್ರಕಾಶ್‌ರಾಜ್‌ ಅರಸ್, ಲೋಕಪಾಲಯ್ಯ, ನಿಲಂಗಾಲ ಜಯಣ್ಣ, ಪುಟ್ಟರಾಜು, ಎಸ್.ಟಿ.ರಾಜಶೇಖರ್, ಪುರಸಭಾ ಸದಸ್ಯ ನಿರಂಜನ್, ರಾಜು ಬೆಟ್ಟದತುಂಗ, ಕಾಮರಾಜು,ಆರ್.ತುಂಗ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT