ಬ್ಯಾಂಕ್‌ನಲ್ಲಿ 2 ಕೆ.ಜಿ ನಕಲಿ ಚಿನ್ನ ಪತ್ತೆ, ಇರುವ ಮೂವರೊಳಗೆ ವಂಚಿಸಿದವರು ಯಾರು?

7

ಬ್ಯಾಂಕ್‌ನಲ್ಲಿ 2 ಕೆ.ಜಿ ನಕಲಿ ಚಿನ್ನ ಪತ್ತೆ, ಇರುವ ಮೂವರೊಳಗೆ ವಂಚಿಸಿದವರು ಯಾರು?

Published:
Updated:

ಮೈಸೂರು: ಇರುವ ಮೂವರೊಳಗೆ ವಂಚಿಸಿದವರು ಯಾರು? ಎಂಬ ಪ್ರಶ್ನೆ ಇದೀಗ ವಿಜಯನಗರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಲಕ್ಷ್ಮೀವಿಲಾಸ ಬ್ಯಾಂಕ್‌ನಲ್ಲಿ ಸನಿಹಾ ರಂಗನಾಥ್ ಎಂಬುವರು ಗಿರವಿ ಇಟ್ಟ ಚಿನ್ನಾಭರಣಗಳ ಪೈಕಿ 2 ಕೆ.ಜಿ 450 ಗ್ರಾಂನಷ್ಟು ನಕಲಿಯಾಗಿದೆ. ₹ 70 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ ಎಂದು ಬ್ಯಾಂಕ್ ವ್ಯವಸ್ಥಾಪಕ ನರಸಿಂಹನ್ ಅವರು ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏನಿದು ಘಟನೆ?: ಸನಿಹಾ ಎಂಬುವರು ಕರ್ಣಾಟಕ ಬ್ಯಾಂಕ್‌ನಲ್ಲಿ 5 ಕೆ.ಜಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದರು. 6 ತಿಂಗಳ ಹಿಂದೆ ಲಕ್ಷ್ಮೀವಿಲಾಸ ಬ್ಯಾಂಕ್‌ನವರು ಬಡ್ಡಿ ದರದಲ್ಲಿ ರಿಯಾಯಿತಿ ನೀಡುವುದಾಗಿ ತಿಳಿಸಿದ ನಂತರ ಆಭರಣವನ್ನು ಕರ್ಣಾಟಕ ಬ್ಯಾಂಕ್‌ನಿಂದ ಬಿಡಿಸಿ ಲಕ್ಷ್ಮೀವಿಲಾಸ ಬ್ಯಾಂಕಿಗೆ ತಂದು ಗಿರವಿ ಇಟ್ಟರು. ಈ ಹಂತದಲ್ಲಿ ಪರೀಕ್ಷಕ ಸುರೇಶ್ ಆಭರಣಗಳನ್ನು ಪರೀಕ್ಷಿಸಿದ್ದಾರೆ. ನಂತರ, ₹ 70 ಲಕ್ಷ ಸಾಲ ಮಂಜೂರು ಮಾಡಲಾಗಿದೆ.

₹ 3 ಲಕ್ಷಕ್ಕಿಂತ ಅಧಿಕ ಮೊತ್ತದ ಸಾಲ ಪಡೆದುಕೊಳ್ಳಲು ಅಡವಿಟ್ಟಿರುವ ಚಿನ್ನಾಭರಣಗಳನ್ನು ಮರಳಿ ಪರೀಕ್ಷಿಸಬೇಕು ಎಂದು ಈಚೆಗೆ ಬ್ಯಾಂಕ್ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಸನಿಹಾ ಅವರು ಅಡವಿಟ್ಟ ಚಿನ್ನಾಭರಣಗಳನ್ನು ಪರೀಕ್ಷಿಸಿದಾಗ 2 ಕೆ.ಜಿ 450 ಗ್ರಾಂನಷ್ಟು ಚಿನ್ನ ನಕಲಿ ಎಂಬುದು ಗೊತ್ತಾಗಿದೆ. ಗಿರವಿ ಇಡುವಾಗ ಚಿನ್ನಾಭರಣಗಳನ್ನು ಪರೀಕ್ಷಿಸಿದ್ದ ಪರೀಕ್ಷಕ ಸುರೇಶ್ ಸರಿಯಾಗಿ ಪರೀಕ್ಷಿಸಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ತಕ್ಷಣ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸರಿಗೆ ವಂಚನೆ ದೂರು ನೀಡಿದ್ದಾರೆ.

ಆಭರಣವನ್ನು ಮತ್ತೆ ಪರೀಕ್ಷಿಸುವ ಸಮಯದಲ್ಲಿ ಬ್ಯಾಂಕ್‌ ಅಧಿಕಾರಿಗಳು ತಮ್ಮನ್ನು ಕರೆದಿರಲಿಲ್ಲ ಎಂದು ಸನಿಹಾ ದೂರುತ್ತಾರೆ. ಹೀಗಾಗಿ, ಇಡೀ ಪ್ರಕರಣ ಪೊಲೀಸರಿಗೆ ಸವಾಲಾಗಿದೆ.

ನಕಲಿ ಚಿನ್ನಾಭರಣ ಗಿರವಿ ಇಟ್ಟಿದ್ದಾರೆಯೇ, ಬ್ಯಾಂಕ್‌ನಲ್ಲೇ ಚಿನ್ನಾಭರಣಗಳು ಅದಲುಬದಲಾಗಿವೆಯೇ, ಪರೀಕ್ಷಕ ಸರಿಯಾಗಿ ಪರೀಕ್ಷಿಸದೇ ಮೋಸ ಮಾಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !