ಭಾನುವಾರ, ಆಗಸ್ಟ್ 1, 2021
27 °C

ಜನ್ಮದಿನದ ಮರುದಿನವೇ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ತಮ್ಮ ಜನ್ಮದಿನದ ಮರುದಿನವೇ ಗೃಹಿಣಿಯೊಬ್ಬರು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಇಲ್ಲಿನ ಪಿಕೆಟಿಬಿ ಕ್ವಾರ್ಟರ್ಸ್‌ ನಿವಾಸಿ ದೀಪಾ (28) ಮೃತಪಟ್ಟವರು.

‘ಇವರು 10 ವರ್ಷಗಳ ಹಿಂದೆಯೇ ವಿಜಯಪುರದ ಪರಸಪ್ಪ ಕಟ್ಟೀಮನಿ ಎಂಬುವವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಇವರ ಪತಿ ಇಲ್ಲಿನ ಪಿಕೆಟಿಬಿ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿದ್ದರು. ಗುರುವಾರವಷ್ಟೇ ಜನ್ಮದಿನ ಆಚರಿಸಿಕೊಂಡು ದೇವಸ್ಥಾನಕ್ಕೆ ಹೋಗಿ ಮನೆಗೆ ಬಂದು ಮಲಗಿದ್ದರು. ಶುಕ್ರವಾರ ಬೆಳಿಗ್ಗೆ ನೋಡುವಷ್ಟರಲ್ಲಿ ನೇಣು ಹಾಕಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಆತ್ಮಹತ್ಯೆ

ಮೈಸೂರು: ಇಲ್ಲಿನ ಮುನೇಶ್ವರನಗರ ನಿವಾಸಿ ಪಲ್ಲವಿ (19) ತಮ್ಮ ಮನೆಯ ಸ್ನಾನದ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌

‘ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದವರಾದ ಇವರು, ಒಂದು ವರ್ಷದ ಹಿಂದೆ ಸಂಬಂಧಿಯಾದ ಸಿದ್ಧರಾಜು ಅವರನ್ನು ವಿವಾಹವಾಗಿದ್ದರು. ಮೊದಲಿನಿಂದಲೂ ಇವರು ಆಗಾಗ್ಗೆ ದೆವ್ವ ಹಿಡಿದವರಂತೆ ವರ್ತಿಸುತ್ತಿದ್ದರು. ಹೀಗಾಗಿ, ಚಿಕ್ಕಮ್ಮದೇವಿ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಮನೆಗೆ ಬಂದ ತಕ್ಷಣ ಇವರು ಸ್ನಾನದ ಕೋಣೆಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿದ್ಯಾರಣ್ಯಪುರಂ ಠಾಣೆಯಲ್ಲಿ ದಾಖಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.