ಪ್ರತ್ಯೇಕ ಪ್ರಕರಣ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

7

ಪ್ರತ್ಯೇಕ ಪ್ರಕರಣ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Published:
Updated:

ಮೈಸೂರು: ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಮೂವರು ಆರೋಪಿಗಳಿಗೆ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಎರಡೂ ಪ್ರಕರಣಗಳಲ್ಲಿ ನ್ಯಾಯಾಧೀಶರಾದ ಕೃಷ್ಣಯ್ಯ ಅವರು ಶಿಕ್ಷೆ ವಿಧಿಸಿದರೆ, ಸರ್ಕಾರಿ ಅಭಿಯೋಜಕ (ಪ್ರಭಾರ) ಪಿ.ಬಿ.ಧರೆಣ್ಣನವರ ವಾದ ಮಂಡಿಸಿದ್ದರು.

₹ 70 ಹಾಗೂ ಮೊಬೈಲ್‌ಗಾಗಿ ಕೊಲೆ!

ನಜರ್‌ಬಾದ್‌ನ ಪೀಪಲ್ಸ್‌ ಉದ್ಯಾನದ ಕಾವಲುಗಾರ ವೆಂಕಟರಂಗಯ್ಯ ಎಂಬುವವರನ್ನು 2016ರ ಅಕ್ಟೋಬರ್ 21ರಂದು ₹ 70 ಹಾಗೂ ಮೊಬೈಲ್‌ಗಾಗಿ ಹತ್ಯೆ ಮಾಡಿದ್ದ ಎಸ್.ಶೇಖರ್, ಸಿ.ಆರ್.ಪ್ರದೀಪ್ ಮತ್ತು ಕುಂಟ ಎಂಬ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಆರೋಪಿಗಳು ಮಂಗಳಮುಖಿಯರಿಂದ ಹಣ ದೋಚುವ ಸಲುವಾಗಿ ಪೀಪಲ್ಸ್ ಉದ್ಯಾನಕ್ಕೆ ಬಂದಿದ್ದಾರೆ. ಇವರನ್ನು ಕಂಡು ಮಂಗಳಮುಖಿಯರು ಪರಾರಿಯಾಗಿದ್ದಾರೆ. ಹಣ ಸಿಗದೆ ಕೋಪಗೊಂಡ ಆರೋಪಿಗಳು ಕಾವಲುಗಾರ ವೆಂಕಟರಂಗಯ್ಯ ಅವರ ಕೊಠಡಿಗೆ ಬಂದು ಮೊಬೈಲ್ ಕಳವು ಮಾಡಲು ಯತ್ನಿಸಿದರು. ಇದಕ್ಕೆ ಪ್ರತಿರೋಧ ಒಡ್ಡಿದಾಗ ವೆಂಕಟರಂಗಯ್ಯ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ₹ 70 ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳಿಗೆ ಜೀವಾವಧಿ ಶಿಕ್ಷೆಯ ಜತೆಗೆ ತಲಾ ₹ 10 ಸಾವಿರ ದಂಡ ವಿಧಿಸಲಾಗಿದೆ.

ಅವಮಾನ ಮಾಡಿದ್ದಕ್ಕೆ ಕೊಲೆ

ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ದಿನೇಶ್‌ ಎಂಬುವವರನ್ನು ಹತ್ಯೆ ಮಾಡಿದ ಆರೋಪಿ ಮನು ಎಂಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ದಿನೇಶ್‌ ಆರೋಪಿಯ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದ. ಇದರಿಂದ ಕೋಪಗೊಂಡಿದ್ದ ಮನು, ದಿನೇಶ್ ಅವರಿಗೆ ಮದ್ಯಪಾನ ಮಾಡಿಸಿ ಟವೆಲ್‌ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದ. ನಂತರ, ಶವವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಜಯನಗರ 4ನೇ ಕ್ರಾಸ್‌ನಲ್ಲಿ ಮನೆಯೊಂದರ ಮೇಲೆ ಇಟ್ಟು ಹೋಗಿದ್ದ. ಈತನಿಗೆ ಜೀವಾವಧಿ ಶಿಕ್ಷೆ ನೀಡಿರುವುದರ ಜತೆಗೆ ಒಟ್ಟು ₹ 10 ಸಾವಿರ ದಂಡ ವಿಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !