ಐವರು ಪೊಲೀಸರ ಅಮಾನತು

7

ಐವರು ಪೊಲೀಸರ ಅಮಾನತು

Published:
Updated:

ಮೈಸೂರು: ವೇಶ್ಯಾವಾಟಿಕೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ವಿಜಯನಗರ ಪೊಲೀಸ್ ಠಾಣೆ ಎಎಸ್‌ಐ ಸಣ್ಣಪ್ಪ, ಹೆಡ್‌ಕಾನ್‌ಸ್ಟೆಬಲ್ ದಿವಾಕರ, ನಗರ ಅಪರಾಧ ಪತ್ತೆ ವಿಭಾಗದ ಕಾನ್‌ಸ್ಟೆಬಲ್‌ಗಳಾದ ರವಿಕುಮಾರ್, ಕೃಷ್ಣೇಗೌಡ, ಮಂಜು ಅಮಾನತುಗೊಂಡವರು.

ಈಚೆಗೆ ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಡೈರಿಯೊಂದು ಸಿಕ್ಕಿತ್ತು. ಅದರಲ್ಲಿ ಕಾನ್‌ಸ್ಟೆಬಲ್‌ ಹಾಗೂ ಸಿಸಿಬಿ ಎಂದು ಹೆಸರು ಬರೆದು ಅದರ ಮುಂದೆ ಇಂತಿಷ್ಟು ಹಣ ಎಂದು ನಮೂದಿಸಲಾಗಿತ್ತು. ಇದು ಪ್ರತಿ ತಿಂಗಳು ನೀಡುತ್ತಿದ್ದ ಲಂಚದ ವಿವರ ಎಂದು ಆರೋಪಿಗಳು ಹೇಳಿದ್ದರು. ಜತೆಗೆ, ಆರೋಪಿಗಳ ಜತೆ ನಿರಂತರ ಮೊಬೈಲ್ ಸಂಪರ್ಕ ಇಟ್ಟುಕೊಂಡಿದ್ದರು. ಹೀಗಾಗಿ, ಅಮಾನತುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !