ಎಸಿಬಿ ಬಲೆಗೆ ಬಿದ್ದ ಪಾಲಿಕೆಯ ದ್ವಿತೀಯದರ್ಜೆ ಸಹಾಯಕ

7

ಎಸಿಬಿ ಬಲೆಗೆ ಬಿದ್ದ ಪಾಲಿಕೆಯ ದ್ವಿತೀಯದರ್ಜೆ ಸಹಾಯಕ

Published:
Updated:

ಮೈಸೂರು: ಅಂಗವಿಕಲ ಕ್ರೀಡಾಪಟುಗಳಿಗೆ ನೀಡುವ ಕ್ರೀಡಾ ಪ್ರೋತ್ಸಾಹಧನ ವಿತರಣೆಗಾಗಿ ₹ 4,500 ಲಂಚ ತೆಗೆದುಕೊಳ್ಳುತ್ತಿದ್ದ ಪಾಲಿಕೆಯ ಅಂಗವಿಕಲರ ಸವಲತ್ತು ವಿಭಾಗದ ದ್ವಿತೀಯದರ್ಜೆ ಸಹಾಯಕ ತೇಜ್‌ಕುಮಾರ್ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕ್ರೀಡಾಪಟು ಒಬ್ಬರಿಗೆ ಪ್ರೋತ್ಸಾಹ ಧನ ಮಂಜೂರಾಗಿತ್ತು. ಈ ಹಣ ನೀಡಲು ಸತಾಯಿಸುತ್ತಿದ್ದ ತೇಜ್‌ಕುಮಾರ್ ಕೊನೆಗೆ ₹ 4,500 ನೀಡಿದರೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು. ಈ ವಿಷಯವನ್ನು ಕ್ರೀಡಾಪಟು ಎಸಿಬಿ ಗಮನಕ್ಕೆ ತಂದರು. ತಕ್ಷಣ ಕಾರ್ಯತತ್ಪರರಾದ ಪೊಲೀಸರು ಬಂಧನಕ್ಕೆ ಬಲೆ ಹೆಣೆದರು.

ಶುಕ್ರವಾರ ಮಧ್ಯಾಹ್ನ ₹ 4,500 ಹಣ ಸ್ವೀಕರಿಸುತ್ತಿದ್ದಂತೆ ಮಫ್ತಿನಲ್ಲಿದ್ದ ಎಸಿಬಿ ಪೊಲೀಸರು ತೇಜ್‌ಕುಮಾರ್ ಅವರನ್ನು ಬಂಧಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !