ಶನಿವಾರ, ಡಿಸೆಂಬರ್ 14, 2019
23 °C

ಅಭಿಷೇಕ್ ಮೃತದೇಹದ ಮರಣೋತ್ತರ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಮೆರಿಕದಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟ ಅಭಿಷೇಕ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ಇವರ ಸಂಬಂಧಿ ಶ್ರೀವತ್ಸ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವೀಸಾ ಸಮಸ್ಯೆ ಬಗೆಹರಿದಿದ್ದು, ಗುರುವಾರ ನಸುಕಿನ 1.20ರ ವಿಮಾನದಲ್ಲಿ ಅಭಿಷೇಕ್ ತಂದೆ, ತಾಯಿ ಸೇರಿದಂತೆ ಒಟ್ಟು ಐವರು ಸ್ಯಾನ್ ಬರ್ನಾರ್ಡಿನೊಗೆ ತೆರಳಲಿದ್ದಾರೆ. ಅವರು ಹೋಗುವ ಸಮಯಕ್ಕೆ ಮರಣೋತ್ತರ ಪರೀಕ್ಷೆ ಮುಗಿದು ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಅಣಿಗೊಳಿಸಲಾಗಿರುತ್ತದೆ. ನಂತರ, ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.

ಅಭಿಷೇಕ್ ಕುಟುಂಬದವರ ಸಹಾಯಾರ್ಥ ಇವರು ಆರಂಭಿಸಿದ್ದ ಆನ್‌ಲೈನ್‌ ದೇಣಿಗೆ ಸಂಗ್ರಹ ಮುಗಿದಿದೆ. ಒಟ್ಟು ₹ 50 ಲಕ್ಷ ಹಣ ಸಂಗ್ರಹವಾಗಿದೆ. 1,800 ಮಂದಿ ಉದಾರವಾಗಿ ಇವರಿಗೆ ಧನಸಹಾಯ ಮಾಡಿದ್ದಾರೆ. ಸಾವಿರಾರು ಮಂದಿ ಅಭಿಷೇಕ್ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು