ಬುಧವಾರ, ಸೆಪ್ಟೆಂಬರ್ 22, 2021
25 °C
ಬೆಲೆಯಲ್ಲಿ ಅರ್ಧಶತಕ ದಾಖಲಿಸಿದ ಹಸಿಮೆಣಸಿನಕಾಯಿ

ಶತಕ ಮುಟ್ಟಿದ ಬೀನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದಲ್ಲೆಡೆ ಸಮಪ್ರಮಾಣದಲ್ಲಿ ಮಳೆ ಬೀಳುತ್ತಿಲ್ಲ. ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಳೆ ಬಿದ್ದರೂ ಉಷ್ಣಾಂಶ ಕಡಿಮೆಯಾಗುತ್ತಿಲ್ಲ. ಇದರಿಂದಾಗಿ ತರಕಾರಿಗಳ ಆವಕ ಕಡಿಮೆಯಾಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೇರಳ ವರ್ತಕರಿಂದ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ, ತರಕಾರಿಗಳ ಬೆಲೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ.‌

ಈ ವಾರ ಬೀನ್ಸ್‌ ಮತ್ತು ಹಸಿಮೆಣಸಿನಕಾಯಿಯ ಬೆಲೆಗಳು ಮತ್ತಷ್ಟು ದುಬಾರಿಯಾಗಿವೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಬೀನ್ಸ್ ಸಗಟು ಬೆಲೆ ಕೆ.ಜಿಗೆ ₹ 70 ಇದೆ. ಕಳೆದ ವಾರ ಇದರ ಬೆಲೆ ₹ 40 ಇತ್ತು. ಚಿಲ್ಲರೆ ಬೆಲೆ ಎಲ್ಲ ತರಕಾರಿ ಮಾರುಕಟ್ಟೆಗಳಲ್ಲೂ ₹ 100ನ್ನು ಮುಟ್ಟಿದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ ಬೀನ್ಸ್ ₹ 100 ಆಗಿದೆ. ಇದರ ಆವಕ ದಿನವೊಂದಕ್ಕೆ 120 ಕ್ವಿಂಟಲ್‌ನಿಂದ 90 ಕ್ವಿಂಟಲ್‌ಗೆ ಕಡಿಮೆಯಾಗಿದೆ.

ಕಳೆದ ವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಧಾರಣೆ ಕೆ.ಜಿಗೆ ₹ 35ಕ್ಕೆ ಮಾರಾಟವಾಗುತ್ತಿದ್ದ ಹಸಿಮೆಣಸಿನಕಾಯಿ ಈಗ ₹ 45ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ ₹ 50ರಿಂದ 65ರವರೆಗೆ ಇದೆ.

ತಮಿಳುನಾಡಿನಿಂದ ಬರುತ್ತಿದ್ದ ಕ್ಯಾರೆಟ್‌ನ ಆವಕವೂ ಈಗ ಕಡಿಮೆಯಾಗತೊಡಗಿದೆ. ಇದರಿಂದ ಇದರ ಸಗಟು ಬೆಲೆ ಕೆ.ಜಿಗೆ ₹ 28ರಿಂದ ₹ 33ಕ್ಕೆ ಹೆಚ್ಚಾಗಿದೆ. ಬದನೆ ಬೆಲೆಯೂ ಈ ವಾರ ₹ 2ರಷ್ಟು ಹೆಚ್ಚಳವಾಗಿದೆ.

ದುಬಾರಿಯಾದ ಧಾನ್ಯಗಳು

ಈ ವಾರ ಹೆಸರುಬೇಳೆಯ ದರ ಹೆಚ್ಚಾಗಿದೆ. ಕಳೆದ ವಾರ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಇದರ ಸಗಟು ಧಾರಣೆ ಕೆ.ಜಿಗೆ ₹ 76 ಇತ್ತು. ಈಗ ಇದು ₹ 84 ಆಗಿದೆ. ಹೆಸರುಕಾಳು ಸಹ ₹ 76ರಿಂದ ₹ 84ಕ್ಕೆ ಏರಿಕೆ ಕಂಡಿದೆ.

ತೊಗರಿಬೇಳೆ ಧಾರಣೆ ಕಳೆದ ವಾರ ₹ 78ರಿಂದ ₹ 90ಕ್ಕೆ ಏರಿಕೆಯಾಗಿತ್ತು. ಈಗಲೂ ಇದೇ ದರದಲ್ಲಿ ಮುಂದುವರಿದಿದೆ. ಆದರೆ, ಉದ್ದಿನಬೇಳೆ ದರ ₹ 84ರಿಂದ ₹ 80ಕ್ಕೆ ಕಡಿಮೆಯಾಗಿದೆ. 

 

ಪಟ್ಟಿ

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 28; 26

ಬೀನ್ಸ್ ; 40; 70

ಕ್ಯಾರೆಟ್; 28; 33

ಎಲೆಕೋಸು; 15; 17

ದಪ್ಪಮೆಣಸಿನಕಾಯಿ; 47; 45

ಬದನೆ ; 06;08

ನುಗ್ಗೆಕಾಯಿ; 25; 25

ಹಸಿಮೆಣಸಿನಕಾಯಿ; 35; 45

ಈರುಳ್ಳಿ; 12; 12

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು