ಸೋಮವಾರ, ಜನವರಿ 17, 2022
20 °C

ಮೇಕೆದಾಟು ಪಾದಯಾತ್ರೆಗೆ ಮೈಸೂರಿನಿಂದ ಹೊರಟ ಕಾಂಗ್ರೆಸ್ ಮುಖಂಡರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೇಕೆದಾಟು ಪಾದಯಾತ್ರೆಗಾಗಿ ಮೈಸೂರು ಜಿಲ್ಲೆಯಿಂದ ಹೊರಟ ತಂಡಕ್ಕೆ ಸ್ವಾತಂತ್ರ್ಯ ಹೋರಾಟಗಾರ ಟಿ.ಪುಟ್ಟಣ್ಣ ಮಂಗಳವಾರ ಶುಭ ಹಾರೈಸಿದರು.

ಇಲ್ಲಿನ ಮಹಾತ್ಮ ಗಾಂಧಿ ಚೌಕದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದ ಅವರು ದೊಡ್ಡ ಗಡಿಯಾರದವರೆಗೂ ಹೆಜ್ಜೆ ಹಾಕಿದರು.

ಶಾಸಕ ಮಂಜುನಾಥ,  ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ ಜೆ. ವಿಜಯಕುಮಾರ್, ಮುಖಂಡರಾದ ವಾಸು, ಆರ್.ಧರ್ಮಸೇನ, ಕಳಲೆ  ಕೇಶವಮೂರ್ತಿ  ಹಾಗೂ  ವಿವಿಧ ಹಂತದ ಕಾಂಗ್ರೆಸ್ ಪದಾಧಿಕಾರಿಗಳು  ಭಾಗಿಯಾದರು. 

ಈ ವೇಳೆ ಮಾತನಾಡಿದ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, 'ಮೈಸೂರಿನಿಂದ ಸುಮಾರು 8 ಸಾವಿರ ಮಂದಿ  ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು