ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ‘ಗ್ರಾವೆಲ್‌ ಫೆಸ್ಟ್ ಆಟೊಕ್ರಾಸ್‌ ರೇಸ್‌’; ಡೀನ್‌ ಮಸ್ಕರೇನಸ್‌ ಮಿಂಚು

ಯೂನುಸ್ ‘ಗ್ರಾವೆಲ್‌ ಕಿಂಗ್‌’
Last Updated 13 ಅಕ್ಟೋಬರ್ 2019, 15:31 IST
ಅಕ್ಷರ ಗಾತ್ರ

ಮೈಸೂರು: ಮಂಗಳೂರಿನ ಅನುಭವಿ ಚಾಲಕ ಡೀನ್‌ ಮಸ್ಕರೇನಸ್‌ ಅವರು ದಸರಾ ಅಂಗವಾಗಿ ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಗ್ರಾವೆಲ್‌ ಫೆಸ್ಟ್ ಆಟೊಕ್ರಾಸ್‌ ರೇಸ್‌’ನಲ್ಲಿ ಗಮನ ಸೆಳೆದರು.

ಆಟೊಮೋಟಿವ್ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಮೈಸೂರು ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಲಲಿತ್‌ಮಹಲ್ ಹೆಲಿಪ್ಯಾಡ್‌ ಮೈದಾನದಲ್ಲಿ ನಡೆದ ರೇಸ್‌ನಲ್ಲಿ ಅದ್ಭುತ ಚಾಲನಾ ಕೌಶಲ ಮೆರೆದ ಮಸ್ಕರೇನಸ್‌ ಅವರು ‘ಇಂಡಿಯನ್‌ ಓಪನ್‌ ಕ್ಲಾಸ್‌’ ಮತ್ತು 1,400 ರಿಂದ 1,650 ಸಿಸಿ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ಯೂನುಸ್‌ ‘ಗ್ರಾವೆಲ್‌ ಕಿಂಗ್’: ಅಪೆಕ್ಸ್‌ ಕ್ಲಾಸ್‌ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ಕೊಲ್ಲಂನ ಯೂನುಸ್‌ ಇಲ್ಯಾಸ್ ‘ಗ್ರಾವೆಲ್‌ ಕಿಂಗ್‌’ ಗೌರವ ತಮ್ಮದಾಗಿಸಿಕೊಂಡರು.

ಒಟ್ಟು ಎಂಟು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕರ್ನಾಟಕ ಮಾತ್ರವಲ್ಲದೆ, ವಿವಿಧ ರಾಜ್ಯಗಳ 100ಕ್ಕೂ ಅಧಿಕ ಚಾಲಕರು ಪಾಲ್ಗೊಂಡರು. ಮಹಿಳೆಯರಿಗೆ ಆಯೋಜಿಸಿದ್ದ ‘ಲೇಡಿಸ್‌ ಕ್ಲಾಸ್‌’ನಲ್ಲಿ 12 ಸ್ಪರ್ಧಿಗಳು ಇದ್ದರು. ಬೆಂಗಳೂರಿನ ಶಿವಾನಿ ಪೃಥ್ವಿ ಮೊದಲ ಸ್ಥಾನ ಗಳಿಸಿದರು.

ಫಲಿತಾಂಶ ಹೀಗಿದೆ: 1,100 ಸಿಸಿ ವಿಭಾಗ: ಎಂ.ಪಿ.ಸೂರಜ್‌ ಮಂದಣ್ಣ (ವಿರಾಜಪೇಟೆ)–1, ಫೈಜ್‌ ರಹಮಾನ್‌ (ಬೆಂಗಳೂರು)–2, ಅಭಿನವ್‌ ಗಣಪತಿ (ಬೆಂಗಳೂರು)–3 ಕಾಲ: 2 ನಿ.27.3 ಸೆ.

1,100 ರಿಂದ 1,400 ಸಿಸಿ: ಅಚಿಂತ್ಯ ಮಲ್ಹೋತ್ರ (ನವದೆಹಲಿ)–1, ಅಸದ್‌ ಪಾಷಾ (ಚಿಕ್ಕಮಗಳೂರು)–2, ಲೋಕೇಶ್‌ ವಿ.ಗೌಡ (ಬೆಂಗಳೂರು)–3 ಕಾಲ: 2 ನಿ.15.6 ಸೆ.

1,400 ರಿಂದ 1,650 ಸಿಸಿ: ಡೀನ್‌ ಮಸ್ಕರೇನಸ್ (ಮಂಗಳೂರು)–1, ಸುಹೇಮ್‌ ಕಬೀರ್‌ (ಕೊಡಗು)–2, ಡೆನ್‌ ತಿಮ್ಮಯ್ಯ (ಮೈಸೂರು)–3 ಕಾಲ: 2 ನಿ. 10.3 ಸೆ.

ಎಸ್‌ಯುವಿ ಓಪನ್: ಸಂಜಯ್‌ ಅಗರವಾಲ್ (ಬೆಂಗಳೂರು)–1, ಅಮನ್‌ಪ್ರೀತ್‌ ಅಹ್ಲುವಾಲಿಯಾ (ನೊಯಿಡಾ)–2, ಗಗನ್‌ ಕರುಂಬಯ್ಯ (ಅಮ್ಮತ್ತಿ)–3 ಕಾಲ: 2 ನಿ. 15.7 ಸೆ.

ಲೇಡೀಸ್‌ ಕ್ಲಾಸ್‌: ಶಿವಾನಿ ಪೃಥ್ವಿ (ಬೆಂಗಳೂರು)–1, ಹರ್ಷಿತಾ ಗೌಡ (ಬೆಂಗಳೂರು)–2, ಎನ್‌.ಪ್ರಿಯಾಂಕ (ಬೆಂಗಳೂರು)–3. ಕಾಲ: 2 ನಿ. 29.8 ಸೆ.

ಮೈಸೂರು ಲೋಕಲ್‌ ನೊವಿಸ್‌ ಓಪನ್: ಡಿ.ಸಿ.ವಿಶ್ವಾಸ್ (ಮೈಸೂರು)–1, ಆರ್‌.ಎಸ್‌.ರೋಹಿತ್‌ (ಮೈಸೂರು)–2, ಜಿನು ಕೆ.ಜಾನ್ಸನ್‌ (ಮೈಸೂರು)–3 ಕಾಲ: 2 ನಿ. 24.8 ಸೆ.

ಅಸ್ಕಾಮ್‌ ಓಪನ್‌ ಕ್ಲಾಸ್: ಸುಹೇಮ್‌ ಕಬೀರ್‌ (ಕೊಡಗು)–1, ಡೀನ್‌ ಮಸ್ಕರೇನಸ್‌ (ಮಂಗಳೂರು)–2, ಧ್ರುವ ಚಂದ್ರಶೇಖರ್‌ (ಬೆಂಗಳೂರು)–3 ಕಾಲ: 2 ನಿ. 6.2 ಸೆ.

ಇಂಡಿಯನ್‌ ಓಪನ್‌ ಕ್ಲಾಸ್: ಡೀನ್‌ ಮಸ್ಕರೇನಸ್‌ (ಮಂಗಳೂರು)–1, ಸುಹೇಮ್‌ ಕಬೀರ್‌ (ಕೊಡಗು)–2, ಬಿಕ್ಕು ಬಾಬು (ಬೆಂಗಳೂರು)–3 ಕಾಲ: 2 ನಿ. 7.8 ಸೆ.

ಅಪೆಕ್ಸ್ ಕ್ಲಾಸ್‌: ಯೂನುಸ್‌ ಇಲ್ಯಾಸ್ (ಕೊಲ್ಲಂ)–1, ಸುಹೇಮ್‌ ಕಬೀರ್‌ (ಕೊಡಗು)–2, ಸೈಯದ್‌ ಸಲ್ಮಾನ್‌ ಅಹಮದ್ (ಮೈಸೂರು)–3 ಕಾಲ: 2 ನಿ. 5.56 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT