ದಸರಾ ಕ್ರೀಡಾಕೂಟ: ಧಾರವಾಡ ತಂಡ ಶುಭಾರಂಭ

7
ದಸರಾ ಕ್ರೀಡಾಕೂಟದ ವಾಲಿಬಾಲ್ ಟೂರ್ನಿ

ದಸರಾ ಕ್ರೀಡಾಕೂಟ: ಧಾರವಾಡ ತಂಡ ಶುಭಾರಂಭ

Published:
Updated:
Deccan Herald

ಮೈಸೂರು: ಶಿಸ್ತಿನ ಆಟವಾಡಿದ ಧಾರವಾಡ ಜಿಲ್ಲಾ ತಂಡದವರು ದಸರಾ ಕ್ರೀಡಾಕೂಟದ ವಾಲಿಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ ವಿಭಾಗದ ಮೊದಲ ಲೀಗ್ ಪಂದ್ಯದಲ್ಲಿ ಧಾರವಾಡ ತಂಡ 25-21, 25-23, 16-25, 25-20 ರಲ್ಲಿ ತುಮಕೂರು ಜಿಲ್ಲಾ ತಂಡವನ್ನು ಮಣಿಸಿತು.

ದಿನದ ಇತರ ಪಂದ್ಯಗಳಲ್ಲಿ ಬೆಂಗಳೂರು ನಗರ ಜಿಲ್ಲಾ ತಂಡ 26-24, 22-25, 25-19, 25-15 ರಲ್ಲಿ ಮೈಸೂರು ಜಿಲ್ಲಾ ತಂಡದ ವಿರುದ್ಧ; ಬಳ್ಳಾರಿ ಜಿಲ್ಲಾ ತಂಡ 33-31, 24-26, 23-25, 25-18, 15-07 ರಲ್ಲಿ ಕೋಲಾರ ವಿರುದ್ಧ ಜಯ ಸಾಧಿಸಿತು. ಈ ಪಂದ್ಯ ಭರ್ತಿ 120 ನಿಮಿಷ ನಡೆಯಿತು.

ಮಹಿಳೆಯರ ವಿಭಾಗದ ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ 25-08, 25-07, 25-09 ರಲ್ಲಿ ರಾಯಚೂರು ವಿರುದ್ಧ ಸುಲಭ ಜಯ ಸಾಧಿಸಿತು.

ಇತರ ಪಂದ್ಯಗಳಲ್ಲಿ ಮೈಸೂರು ತಂಡ 25-15, 25-18, 25-18 ರಲ್ಲಿ ಬೆಳಗಾವಿ ವಿರುದ್ಧ; ಧಾರವಾಡ ತಂಡ 25-13, 25-18, 25-14 ರಲ್ಲಿ ಬಳ್ಳಾರಿ ವಿರುದ್ಧ; ಬೆಂಗಳೂರು ನಗರ ತಂಡ 25-10, 25-21, 25-16 ರಲ್ಲಿ ಹಾಸನ ವಿರುದ್ಧ ಜಯ ಪಡೆಯಿತು.

ಕೊಕ್ಕೊ: ದಸರಾ ಕ್ರೀಡಾಕೂಟದ ಕೊಕ್ಕೊ ಟೂರ್ನಿಯಲ್ಲಿ ಮೈಸೂರಿನ ತಂಡಗಳು ಶುಭಾರಂಭ ಮಾಡಿದವು. ಪುರುಷರ ವಿಭಾಗದ ಪಂದ್ಯದಲ್ಲಿ ಮೈಸೂರಿನ ತಂಡ ತುಮಕೂರು ವಿರುದ್ಧ ಎರಡು ಪಾಯಿಂಟ್‌ಗಳಿಂದ ಗೆಲುವು ಪಡೆಯಿತು.

ಇತರ ಪಂದ್ಯಗಳಲ್ಲಿ ಬೆಳಗಾವಿ 15–12 ರಲ್ಲಿ ಧಾರವಾಡ ವಿರುದ್ಧ, ಬಾಗಲಕೋಟೆ 14–12 ರಲ್ಲಿ ಹಾವೇರಿ ವಿರುದ್ಧ ಜಯ ಸಾಧಿಸಿತು.

ಮಹಿಳೆಯರ ವಿಭಾಗದ ಪಂದ್ಯದಲ್ಲಿ ಮೈಸೂರು 10–4 ರಲ್ಲಿ ತುಮಕೂರು ವಿರುದ್ಧ; ಬಾಗಲಕೋಟೆ 8–4 ರಿಂದ ಹಾವೇರಿ ವಿರುದ್ಧ; ಬೆಳಗಾವಿ 10–9 ರಿಂದ ಧಾರವಾಡ ವಿರುದ್ಧ ಗೆಲುವು ಪಡೆಯಿತು.

ಉದ್ಘಾಟನೆ: ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಅಥ್ಲೀಟ್‌ ಎಂ.ಆರ್‌.ಪೂವಮ್ಮ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅ.16ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳ 4,500 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !