ಯುವಸಂಭ್ರಮದಲ್ಲಿ ಅಂಕವಿಕಲರ ಆಕರ್ಷಣೆ

7

ಯುವಸಂಭ್ರಮದಲ್ಲಿ ಅಂಕವಿಕಲರ ಆಕರ್ಷಣೆ

Published:
Updated:
Deccan Herald

ಮೈಸೂರು: ದಸರಾ ಯುವಸಂಭ್ರಮ ಅಂಗವಾಗಿ ಬಯಲು ರಂಗಮಂದಿರದ ವೇದಿಕೆ ಶುಕ್ರವಾರ ಭಿನ್ನವಾಗಿತ್ತು. ವೇದಿಕೆಯ ಮೇಲೂ ಕತ್ತಲೆ, ಎದುರಿನ ಪ್ರೇಕ್ಷಕರಲ್ಲೂ ಕತ್ತಲೆ. ಆದರೆ, ಪ್ರೇಕ್ಷಕರ ಮೊಬೈಲ್‌ ದೀಪಗಳಲ್ಲಿ ಮಾತ್ರ ಬೆಳಕು. ಕತ್ತಲೆಯ ಈ ಜಗತ್ತಿನಲ್ಲಿ ನಕ್ಷತ್ರಲೋಕವನ್ನೇ ಕಂಡಂತಹ ಅನುಭವ!

ಶುಕ್ರವಾರ ಯುವಸಂಭ್ರಮದಲ್ಲಿ ಅಂಗವಿಕಲರ ಪ್ರದರ್ಶನವೇ ಆಕರ್ಷಣೆಯ ಕೇಂದ್ರ. ಮೈಸೂರಿನ ಪುಟ್ಟೀರಮ್ಮ ವಾಕ್ ಮತ್ತು ಶ್ರವಣ ಶಾಲೆಯ ವಿದ್ಯಾರ್ಥಿಗಳು ವೇದಿಕೆಗೆ ಬಂದಾಕ್ಷಣ ಈ ರೀತಿ ನಕ್ಷತ್ರಲೋಕವನ್ನು ಸೃಷ್ಟಿಸಲಾಯಿತು. ಅಂಗವಿಕಲರು ನಮ್ಮ ನಡುವಣ ನಕ್ಷತ್ರಗಳೆಂದು ಹೇಳಿ ಗೌರವದಿಂದ ಕಾಣಲಾಯಿತು.

ಅಂಗವಿಕಲರಾದರೂ ನೃತ್ಯಕ್ಕೆ ಬೇಕಿರುವುದು ಉತ್ಸಾಹ ಸಾಕು ಎನ್ನುವುದು ಈ ಮಕ್ಕಳ ಉದ್ದೇಶವಾಗಿತ್ತು. ಯೋಧರ ಸಾಹಸ, ರೈತನ ತ್ಯಾಗಗಳನ್ನು ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಕಟ್ಟಿಕೊಟ್ಟರು. ಕುವೆಂಪು, ಎ.ಪಿ.ಜೆ.ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ ಗೌರವಿಸಿದರೆ, ಪ್ರೇಕ್ಷಕರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಮಕ್ಕಳಿಗೆ ಗೌರವ ಸಮರ್ಪಿಸಿದರು.

ಮಂಡ್ಯದ ಶಂಕರೇಗೌಡ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಪ್ರೇಮ ಕುರಿತು ನೃತ್ಯರೂಪಕ ಪ್ರದರ್ಶಿಸಿದರು. ಪ್ರಕೃತಿ ನಾಶದಿಂದಾಗುವ ಅಡ್ಡ ಪರಿಣಾಮಗಳನ್ನು ಗೀತೆ, ನೃತ್ಯಗಳ ಮೂಲಕ ಕಟ್ಟಿಕೊಟ್ಟು ಗಮನಸೆಳೆದರು. ಹಾಸನದ ಅರಕಲಗೂಡಿನ ವರದರಾಜಲು ಕಾಂತಮ್ಮ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಮಹಿಳಾ ಸಬಲೀಕರಣ ಕುರಿತು ನೃತ್ಯರೂಪಕ ಸಮರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !