ಶುಕ್ರವಾರ, ಮೇ 7, 2021
20 °C

ಶ್ವಾನದಳದ ‘ಹೀರೊ’ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಮಾದಕ ದ್ರವ್ಯ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ‘ಹಿರೋ’ ಎಂಬ ಹೆಸರಿನ ಲ್ಯಾಬ್ರಡಾರ್ ತಳಿಯ ಶ್ವಾನವು ಶುಕ್ರವಾರ ವಯೋ ಸಹಜ ಕಾಯಿಲೆಗಳಿಂದ ನಿಧನವಾಯಿತು.

ತರಬೇತಿ ಪಡೆದ ಈ ಶ್ವಾನವು 2011ರ ಏಪ್ರಿಲ್ 4ರಂದು ಇಲಾಖೆಗೆ ಸೇರಿತ್ತು. ಹಲವು ಶ್ವಾನ ಪ್ರದರ್ಶನಗಳು ಹಾಗೂ ಅಣಕು ಕಾರ್ಯಾಚರಣೆಗಳಲ್ಲಿ ಈ ಶ್ವಾನವು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿತ್ತು. ಬಿ.ಎಸ್.ಸುನಿಲ್‌ಕುಮಾರ್ ಅವರು ಇದರ ತರಬೇತುದಾರರಾಗಿದ್ದರು.

ಈ ಶ್ವಾನವು ಇಲಾಖೆಯಲ್ಲಿ ಸುಮಾರು 10 ವರ್ಷ 12 ದಿನಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿತ್ತು. ನಂತರ, ಇದು  ವಯೋ ಸಹಜ ಕಾಯಿಲೆಯಿಂದ ಬಳಲುತ್ತಿತ್ತು.‌

ಇದರ ಪಾರ್ಥೀವಶರೀರಕ್ಕೆ ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಶಿವರಾಜು ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಶ್ವಾನದಳದ ಉಸ್ತುವಾರಿ ಅಧಿಕಾರಿಗಳಾದ ಕೆ.ಎಂ.ಮೂರ್ತಿ, ಸೋಮಣ್ಣ, ಸುರೇಶ್ ಹಾಗೂ ಶ್ವಾನದಳದ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.