ಶುಕ್ರವಾರ, ನವೆಂಬರ್ 22, 2019
21 °C

ಸೆ. 9ರಂದು ನಗರಕ್ಕೆ 2ನೇ ಹಂತದ ಗಜಪಡೆ

Published:
Updated:

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸುವ 2ನೇ ಹಂತದ ಗಜಪಡೆ ಸೆ. 9ರಂದು ಅರಮನೆಗೆ ಬರಲಿವೆ. ಈಗಾಗಲೇ ಮತ್ತಿಗೋಡು ಶಿಬಿರದಿಂದ ಬಲರಾಮ (61) ಆನೆ ಬಂದಿದೆ.

ದುಬಾರೆ ಶಿಬಿರದಿಂದ ಕಾವೇರಿ (41), ವಿಕ್ರಂ (46) ಹಾಗೂ ಗೋಪಿ (37), ಕೆ.ಗುಡಿ ಶಿಬಿರದಿಂದ ದುರ್ಗಾ ಪರಮೇಶ್ವರಿ (52), ಬಂಡೀಪುರದ ರಾಮಪುರ ಶಿಬಿರದಿಂದ ಜಯಪ್ರಕಾಶ್ (57), ಲಕ್ಷ್ಮೀ (17) ಹಾಗೂ ರೋಹಿತ್ (19) ಆನೆಗಳು ಬರಲಿವೆ. ಇವುಗಳಲ್ಲಿ ಲಕ್ಷ್ಮೀ ಮತ್ತು ರೋಹಿತ್‌ ದಸರೆ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಲಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)