ವಿಶ್ವ ಆನೆ ದಿನಾಚರಣೆಯಂದೇ ಹೆಣ್ಣಾನೆ ಬಲಿ 

7

ವಿಶ್ವ ಆನೆ ದಿನಾಚರಣೆಯಂದೇ ಹೆಣ್ಣಾನೆ ಬಲಿ 

Published:
Updated:

ಮೈಸೂರು :  ವಿಶ್ವ ಆನೆ ದಿನಾಚರಣೆಯಂದೇ ಹೆಣ್ಣಾನೆ ವಿದ್ಯುತ್ ತಂತಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೆಡಿಯಾಲ ವಲಯದ ಚಿಕ್ಕಬರಗಿ ಗ್ರಾಮದಲ್ಲಿ  ಭಾನುವಾರ ನಡೆದಿದೆ.

ಗೋಪಿ ಎಂಬ ರೈತ ತನ್ನ ಹತ್ತಿ ಜಮೀನಿಗೆ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದರು. ಈ ತಂತಿ ಬೇಲಿಗೆ ಸಿಲುಕಿ 15 ವರ್ಷದ ಹೆಣ್ಣಾನೆ ಮೃತಪಟ್ಟಿದೆ.

ಬಂಡೀಪುರ ಅರಣ್ಯದ ವನ್ಯಜೀವಿ ವೈದ್ಯ ನಾಗರಾಜು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ.

ಸ್ಥಳಕ್ಕೆ ಸಿಎಫ್. ಬಸವರಾಜು, ಎಸಿಎಫ್. ಪರಮೇಶ್ವರ್, ವಲಯ ಅರಣ್ಯಾಧಿಕಾರಿ ಸಂದೀಪ್, ಸರಗೂರು ಪಿಎಸ್ ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !