ಪರಿಸರಸ್ನೇಹಿ ಗಣಪ

7

ಪರಿಸರಸ್ನೇಹಿ ಗಣಪ

Published:
Updated:

ದಿವಂದಿತ ಗಣಪತಿಯ ಆರಾಧನೆಗೆ ದಿನಗಣನೆ ಆರಂಭವಾಗಿದೆ. ಅದಕ್ಕೆ ಬೇಕಾದ ಸಿದ್ಧತೆಗಳೂ ಭರದಿಂದಲೇ ಸಾಗಿವೆ. ಯಾವ ರೀತಿ ಹಬ್ಬವನ್ನು ಆಚರಿಸಬೇಕು, ಎಷ್ಟು ದಿನ ಗಣಪತಿಯನ್ನು ಕೂರಿಸಬೇಕು, ವಿಸರ್ಜನಾ ಕಾರ್ಯಕ್ರಮ ಎಂತಿರಬೇಕು ಎಂಬ ಬಗ್ಗೆ ಆಲೋಚನೆಗಳೂ ಮನದಲ್ಲಿ ಈಗಾಗಲೇ ಹಾದು ಹೋಗಿರಬೇಕಲ್ಲ.

ಗಣಪತಿಯ ಮೂರ್ತಿಯ ಬಗೆಗಿನ ಕಲ್ಪನೆಗಳು, ಮೂರುತಿಯ ವಿನ್ಯಾಸ, ಆಕಾರಗಳ ಬಗೆಗೂ ಈ ಬಾರಿ ಕೊಂಚ ಹೆಚ್ಚು ಲಕ್ಷ್ಯ ನೀಡಬೇಕಿದೆ. ಇದಕ್ಕೆ ಕಾರಣ ಏನೆಂದರೆ ಮೈಸೂರು ಮಹಾನಗರ ಪಾಲಿಕೆಯು ಈ ಬಾರಿ ಪರಿಸರಪ್ರಿಯ ಗಣಪತಿಯನ್ನು ಆರಾಧಿಸುವಂತೆ ಸೂಚನೆ ನೀಡಿದೆ. ಈ ಕಾರಣದಿಂದಾಗಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ), ಪ್ಲಾಸ್ಟಿಕ್‌ ಹಾಗೂ ಕಾಗದದಿಂದ ಮಾಡಿದ ಗಣಪತಿ ಮೂರ್ತಿಯನ್ನು ನಿಷೇಧಿಸಿದೆ. ಪರಿಸರ ಜಾಗೃತಿ ಪರಿಣಾಮದಿಂದ ಮೂರ್ನಾಲ್ಕು ವರ್ಷಗಳಿಂದೀಚೆಗೆ ಪರಿಸರಸ್ನೇಹಿ ಗಣಪನಿಗೆ ಜನರು ಜೈ ಎನ್ನುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ನರದ ಎಲ್ಲೆಡೆ ಈ ಬಾರಿ ಮಣ್ಣಿನ ಗಣಪತಿ ಮೂರ್ತಿಗೇ ಬೇಡಿಕೆ ಹೆಚ್ಚಿದೆ.

ಪಿಒಪಿ, ಕಾಗದ ಮತ್ತು ರಾಸಾಯನಿಕ ಬಣ್ಣ ಬಳಸಿ ತಯಾರಿಸಿರುವ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ. ಮಣ್ಣಿನ ಗೌರಿ- ಗಣಪತಿಯ ವಿಗ್ರಹವನ್ನು ಪೂಜಿಸುವುದರಿಂದ ಪರಿಸರಕ್ಕೆ ಯಾವುದೇ ಸಮಸ್ಯೆ ಆಗದು. ಪಿಒಪಿ ಮತ್ತು ಬಣ್ಣದ ಗಣಪತಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅವುಗಳನ್ನು ಕಾಲುವೆಗಳಲ್ಲಿ ಬಿಡುವುದರಿಂದ ನೀರು ವಿಷಪೂರಿತವಾಗಲಿದೆ. ಮಣ್ಣಿನ ವಿಗ್ರಹ ಬಳಸಿದರೆ ಅದು ನೀರಿನಲ್ಲಿ ಕರಗುತ್ತದೆ. ಪರಿಸರಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂಬುದನ್ನು ಮೂರ್ತಿ ತಯಾರಿಕರಿಗೂ ಮನವರಿಕೆ ಮಾಡಿಕೊಡಲಾಗಿದೆ.

ಪರಿಸರಕ್ಕೆ ಹಾನಿಯಾಗದಂತೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಮಣ್ಣಿನ ಗಣಪತಿಯನ್ನು ತಯಾರಿಸಿ ಮಾರಾಟ ಮಾಡಬೇಕಿದೆ. ಪರಿಸರದ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದು ಪಾಲಿಕೆ ಆಯುಕ್ತರೂ ನಿರ್ದೇಶನ ನೀಡಿದ್ದಾರೆ.

ಪರಿಸರಕ್ಕೆ ಹಾನಿಕಾರಕವಲ್ಲದ ಜೇಡಿಮಣ್ಣಿನ ನೈಸರ್ಗಿಕ ಗಣಪತಿ ಪೂಜಿಸುವ ಮೂಲಕ ಪರಿಸರ ಕಾಳಜಿ ವ್ಯಕ್ತಪಡಿಸಬೇಕಿದೆ. ಈ ಮೂಲಕ ಜಲ ಮೂಲಗಳ ಉಳಿವಿಗೆ ಪ್ರಯತ್ನ ಮಾಡಬೇಕಿದೆ ಎಂಬುದನ್ನೂ ಮೂರ್ತಿ ತಯಾರಿಕರಿಗೂ, ಸಾರ್ವಜನಿಕರಿಗೂ ಮನವರಿಕೆ ಮಾಡಿಕೊಡುವ ಪ್ರಯತ್ನವೂ ನಡೆಯುತ್ತಿದೆ.

ಬಾವಿ, ಕೆರೆ, ನದಿಗಳಲ್ಲಿ ಗಣಪತಿ ವಿಸರ್ಜನೆ ಮಾಡದೆ ಬಕೆಟ್‌ಗಳಲ್ಲಿ, ಸಂಚಾರಿ ವಿಸರ್ಜನಾ ವಾಹನಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಕು. ಗಣಪತಿ ವಿಸರ್ಜಿಸುವ ಮೊದಲು ಅದಕ್ಕೆ ಹಾಕಿರುವ ಹೂವು, ವಸ್ತ್ರ, ಹಾರಗಳನ್ನು ತೆಗೆದು ಪ್ರತ್ಯೇಕ ಸ್ಥಳಗಳಲ್ಲಿ ವಿಲೇವಾರಿ ಮಾಡಬೇಕು. ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸದೆ, ಅಬ್ಬರದಿಂದ ಬೊಬ್ಬಿರಿಯುವ ಧ್ವನಿವರ್ಧಕಗಳಿಗೆ ಕಡಿವಾಣ ಹಾಕಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕಿದೆ.

ಪರಿಸರಸ್ನೇಹಿ ಗಣಪತಿ ಮೂರ್ತಿಗೆ ಸಂಬಂಧಿಸಿ ಪಾಲಿಕೆ ಜತೆ ಈಗಾಗಲೇ ಸಭೆ ನಡೆಸಲಾಗಿದೆ. ಭಾರ ಲೋಹದ ಬಣ್ಣ ಬಳಸಬಾರದು ಎಂದೂ, ಗಣಪತಿ ಮೂರ್ತಿಗಳ ಗಾತ್ರದ ಬಗ್ಗೆಯೂ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಪಾಲಿಕೆ ವತಿಯಿಂದ ಪ್ರತಿ ವಾರ್ಡ್‌ಗೂ ಒಂದೊಂದು ವಿಸರ್ಜನಾ ವಾಹನ ನಿಯೋಜಿಸಿದ್ದಾರೆ. ಅದೇ ರೀತಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದಲ್ಲಿ ಮೂರು ವಿಸರ್ಜನಾ ಟ್ಯಾಂಕ್‌ಗಳನ್ನು ಸಿದ್ಧಗೊಳಿಸುತ್ತಿದ್ದೇವೆ. ಮಣ್ಣಿನ ಗಣಪಪತಿಯನ್ನೇ ಬಳಸಬೇಕು ಎಂದು ಶಾಲೆ, ಕಾಲೇಜುಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಪಿಒಪಿ, ಕಾಗದದ ಗಣಪತಿ ಮೂರ್ತಿಗಳು ನಗರ ಪ್ರವೇಶಿಸದಂತೆ ಎಚ್ಚರವಹಿಸಲು ಪೊಲೀಸ್‌ ಇಲಾಖೆ ಜತೆ ಕೈಜೋಡಿಸಲಾಗುವುದು. ನಿಷೇಧಿತ ಮಾದರಿಯ ಮೂರ್ತಿಗಳನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳಲಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್ ಮಾಹಿತಿ ನೀಡಿದರು.

ಮಣ್ಣಿನಲ್ಲಿ ಗಣಪತಿ ಮೂರ್ತಿ ತಯಾರಕರು ಎಂದಿಗಿಂತ ಈ ಬಾರಿ ಕೊಂಚ ಹೆಚ್ಚೇ ಬ್ಯುಸಿ ಆಗಿದ್ದಾರೆ. ಕುಂಬಾರಕೇರಿಯ ಗಲ್ಲಿಗಳಲ್ಲಿ ಹೆಜ್ಜೆ ಇರಿಸಿದರೆ ಈ ಅಂಶ ವೇದ್ಯವಾಗುತ್ತದೆ. ಪಾಲಿಕೆ, ಪರಿಸರ ನಿಯಂತ್ರಣ ಮಂಡಳಿಯ ನಿರ್ದೇಶನಗಳ ಆಧಾರದಲ್ಲಿ ಗಣಪತಿ ಮೂರ್ತಿಗಳನ್ನು ಸಿದ್ಧಗೊಳಿಸುತ್ತಿದ್ದಾರೆ.

ಹಳ್ಳಿಗಳಲ್ಲಿರುವ ಕೆರೆಯಿಂದ ಮಣ್ಣು ತರಿಸಿ 6 ತಿಂಗಳು ಕೊಳೆಯಿಸುತ್ತವೆ. ಹಬ್ಬಕ್ಕೆ ಮೂರು 4 ತಿಂಗಳು ಇರುವಾಗ ತಯಾರಿಕೆ ಕಾರ್ಯ ಆರಂಭಿಸುತ್ತೇವೆ. ಅರ್ಧ ಅಡಿಯ ಸಣ್ಣ ಗಣಪತಿ ಮೂರ್ತಿಗಳಿಂದ 4 ಅಡಿಯ ವರೆಗಿನ ಗಣಪತಿ ಮೂರ್ತಿಗಳನ್ನು ತಯಾರಿಸುತ್ತೇವೆ ಎಂದು 40 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಸುತ್ತಿರುವ ತಯಾರಿಸುತ್ತಿರುವ ಎನ್‌.ಶ್ರೀನಿವಾಸಮೂರ್ತಿ ವಿವರಿಸಿದರು.

ನಮ್ಮಲ್ಲಿ 10 ರೂಪಾಯಿಯಿಂದ ಗರಿಷ್ಠ 275 ರೂಪಾಯಿ ವರೆಗಿನ ಮೂರ್ತಿಗಳು ಇವೆ. ರಾಸಾಯನಿಕ, ಸೀಸದ ಬಣ್ಣಗಳನ್ನು ಬಳಸುವುದರಿಂದ ಉಂಟಾಗುವ ಅಪಾಯದ ಅರಿವು ಇರುವುದರಿಂದ ಕೇವಲ ಮಣ್ಣಿನ ಮೂರ್ತಿಗಳನ್ನಷ್ಟೇ ನಾವು ತಯಾರಿಸುತ್ತೇವೆ. ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿದಾಗ ಅದು ತೇಲಬಾರದು, ಮುಳುಗಿ ಕರಗಬೇಕು. ನಾವು ರಚಿಸಿದ ಗಣಪತಿ ಮೂರ್ತಿಗಳು ಬೆಂಗಳೂರು, ದುಬೈನಲ್ಲೂ ಪೂಜೆಗೊಂಡಿವೆ ಎನ್ನುತ್ತಾರೆ ಶ್ರೀನಿವಾಸಮೂರ್ತಿ.

ಪರಿಸರಕ್ಕೆ ಪೂರಕವಾದ ರೀತಿಯಲ್ಲೇ ನಾವು ಗಣಪತಿ, ಗೌರಿಯ ವಿಗ್ರಹಗಳನ್ನು ತಯಾರಿ ಸುತ್ತೇವೆ. ನೈಸರ್ಗಿಕ ಬಣ್ಣಗಳನ್ನು ಬಳಸಿ ಮೂರ್ತಿಗಳ ಅಂದ ಹೆಚ್ಚಿಸುತ್ತೇವೆ. ಶಂಖದ ಮೇಲೆ ಆರೂಢನಾಗಿರುವ ಗಣಪತಿ ಮೂರ್ತಿ ಹಾಗೂ ಗೌರಿಯ ವಿವಿಧ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ ಎಂದು ವೆಂಕಟಮ್ಮ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !