ಮಂಗಳವಾರ, ಅಕ್ಟೋಬರ್ 27, 2020
24 °C

ಬಾಗಿಲು ಮೀಟಿ ಚಿನ್ನಾಭರಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ಇಲ್ಲಿಯ ವಿದ್ಯಾನಗರ ಬಡಾವಣೆಯಲ್ಲಿ ಮಾಲೀಕರು ಊರಿಗೆ ಹೋಗಿದ್ದನ್ನು ಕಂಡ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಮನೆ ಬಾಗಿಲು ಮೀಟಿ ಚಿನ್ನಾಭರಣ ದೋಚಿದ್ದಾರೆ.

ಧರಣಿಕುಮಾರ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿದ್ದು, ಅಂದಾಜು ₹ 4 ಲಕ್ಷ ಮೌಲ್ಯದ 75 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ ಹಾಗೂ ₹ 15 ಸಾವಿರ  ನಗದು ದೋಚಿದ್ದಾರೆ.

ವಿವಿಧ ಕಂಪನಿಯ ಉತ್ಪನ್ನಗಳ ಮಾರಾಟ ಏಜೆನ್ಸಿ ನಡೆಸುವ ಧರಣಿಕುಮಾರ್ ಕುಟುಂಬದೊಂದಿಗೆ ಬೆಂಗಳೂರಿಗೆ ತೆರಳಿದ್ದರು. ಆಗ ಕಳ್ಳತನ ನಡೆದಿದೆ. ಶಬ್ದ ಕೇಳಿ ನೆರೆಹೊರೆಯವರು ಎಚ್ಚರವಾಗಿದ್ದನ್ನು ಕಂಡು ಮಾಲೀಕನ ಬೈಕ್‌ ಬಳಸಿ ಪರಾರಿಯಾಗಿದ್ದು, ಬೈಕ್‌ನ್ನು ಮಲ್ಲನಮೂಲೆ ಮಠದ ಬಳಿ ಬಿಟ್ಟು ಹೋಗಿದ್ದಾರೆ.

ಸ್ಥಳಕ್ಕೆ ಬಂದ ಡಿ.ವೈ.ಎಸ್.ಪಿ. ಪ್ರಭಾಕರ್ ರಾವ್ ಶಿಂಧೆ, ಸಿ.ಪಿ.ಐ ಲಕ್ಷ್ಮಿಕಾಂತ ತಳವಾರ್, ಪಿ.ಎಸ್.ಐ ಸತೀಶ್ ಪರಿಶೀಲಿಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು.

ಈ ಕುರಿತು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು