ಸೋಮವಾರ, ಫೆಬ್ರವರಿ 17, 2020
17 °C

ಗಂಡ- ಹೆಂಡತಿಯರೇ ಒಟ್ಟಿಗೆ ಇರಲ್ಲ, ನಾವು ಒಟ್ಟಿಗೆ ಇರೋಕೆ ಆಗುತ್ತಾ: ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಗಂಡ-ಹೆಂಡತಿಯರೇ ಒಟ್ಟಿಗೆ ಇರುವುದಿಲ್ಲ. ಹಾಗಿರುವಾಗ ನಾವು ಎಲ್ಲರೂ ಒಟ್ಟಿಗೆ ಇರಲು ಆಗುತ್ತಾ  ಎಂದು ಬಿಜೆಪಿ ಮುಖಂಡ ಅಡಗೂರು ಎಚ್.ವಿಶ್ವನಾಥ್ ಪ್ರಶ್ನಿಸಿದರು. 

ನೂತನ ಸಚಿವರ ಪ್ರಮಾಣ  ವಚನಕ್ಕೆ ಸ್ವೀಕಾರ  ಸಮಾರಂಭಕ್ಕೆ ಎಂ.ಟಿ.ಬಿ. ನಾಗರಾಜು ಗೈರು ಸಂಬಂಧಕ್ಕೆ ಮೈಸೂರಿನಲ್ಲಿ ಶುಕ್ರವಾರ  ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಹೊರಬಂದ ನಾವು 17 ಮಂದಿ ಇಂದಿಗೂ ಒಟ್ಟಿಗೆ ಇದ್ದೇವೆ. ಎಲ್ಲ ಸಮಯದಲ್ಲಿ ತಬ್ಬಿಕೊಂಡಿರಲು ಸಾಧ್ಯವಿಲ್ಲ. ಕೆಲ ಸಮಯದಲ್ಲಿ ಒಬ್ಬರು-ಇಬ್ಬರು ಮಿಸ್ ಆಗುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು 17 ಮಂದಿ ಇಂದಿಗೂ ಅರ್ಹರಲ್ಲ ಎಂದು ಹೇಳುತ್ತಾರೆ. ಎಲ್ಲರೂ ಸಂವಿಧಾನದ ಅನುಸಾರವಾಗಿಯೇ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಜನರಿಂದ ಆದೇಶ ಪಡೆದು ಗೆದ್ದನಂತರವೇ ಮಂತ್ರಿಗಳಾಗಿದ್ದಾರೆ. ವಿರೋಧ ಪಕ್ಷದ ನಾಯಕರಾದ ಮಾತ್ರಕ್ಕೆ ಪ್ರತಿಯೊಂದನ್ನು ಟೀಕೆ ಮಾಡುವುದು ಸರಿಯಲ್ಲ. ಎಲ್ಲರೂ ಹಣ ನೀಡಿ ಗೆದ್ದು ಬಂದಿದ್ದಾರೆ ಎಂಬ ಹೇಳಿಕೆಯ ಅರ್ಥವೇನು ? ಹಾಗಾದರೆ ಸಿದ್ದರಾಮಯ್ಯ ಕೂಡ ಹಣ ನೀಡಿ ಗೆದ್ದು ಬಂದಿದ್ದಾರಾ ಎಂದು ತಿರುಗೇಟು ನೀಡಿದರು.

ಪ್ರಜಾಪ್ರಭುತ್ವದ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುವ ಸಿದ್ದರಾಮಯ್ಯ ಅವರು ಸಂವಿಧಾನದ ಪ್ರಕಾರ ಅರ್ಹರಾಗಿರುವ ಶಾಸಕರನ್ನು ಅನರ್ಹರು ಎನ್ನುವುದು ಸಂವಿಧಾನಕ್ಕೆ  ತೋರುವ ಅಗೌರವವಲ್ಲವೇ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು