ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ–ಉಪವಿಶೇಷಾಧಿಕಾರಿ, ಕಾರ್ಯಾಧ್ಯಕ್ಷ, ಕಾರ್ಯದರ್ಶಿ ನೇಮಕ

Last Updated 15 ಸೆಪ್ಟೆಂಬರ್ 2021, 3:31 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಕಾರ್ಯಕ್ರಮ ಆಯೋಜಿಸಲು ಹಾಗೂ ಸಿದ್ಧತೆ ನಡೆಸಲು ಆರು ಉಪಸಮಿತಿ ರಚಿಸಿ, ಅಧಿಕಾರಿಗಳನ್ನು ನೇಮಿಸಲಾಗಿದೆ.

ಸ್ವಾಗತ ಮತ್ತು ಆಮಂತ್ರಣ, ದೀಪಾಲಂಕಾರ, ಮೆರವಣಿಗೆ, ಸಾಂಸ್ಕೃತಿಕ ದಸರಾ, ಸ್ವಚ್ಛತೆ ಮತ್ತು ವ್ಯವಸ್ಥೆ ಹಾಗೂ ಸ್ತಬ್ಧಚಿತ್ರ ಸಮಿತಿಗಳು ಕಾರ್ಯನಿರ್ವಹಿಸಲಿವೆ.‌

ದಸರಾ ಮಹೋತ್ಸವ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಮಂಗಳವಾರ ಈ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಉಪಸಮಿತಿಗಳು; ಸ್ವಾಗತ ಮತ್ತು ಆಮಂತ್ರಣ: ಉಪ ವಿಶೇಷಾಧಿಕಾರಿ–ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ, ಕಾರ್ಯಾಧ್ಯಕ್ಷರು–ಪಾಲಿಕೆಯ ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ, ಮೈಸೂರು ಉಪವಿಭಾಗಾಧಿಕಾರಿ ಬಿ.ಕಮಲಾ ಬಾಯಿ, ಕಾರ್ಯದರ್ಶಿ–ವಲಯ ಆಯುಕ್ತ (7) ಎಂ.ನಂಜುಂಡಯ್ಯ.

ದೀಪಾಲಂಕಾರ: ಉಪ ವಿಶೇಷಾಧಿಕಾರಿ–ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ, ಕಾರ್ಯಾಧ್ಯಕ್ಷ– ಸೆಸ್ಕ್‌ ಸೂಪರಿಂಟೆಂಡೆಂಟ್‌ ಎಂಜಿನಿಯರ್ ನಾಗೇಶ್‌, ಕಾರ್ಯದರ್ಶಿ–ಕಾರ್ಯಪಾಲಕ ಎಂಜಿನಿಯರ್ ಬಿ.ಕೆ.ಯೋಗೇಶ್‌.

ಮೆರವಣಿಗೆ: ಉಪ ವಿಶೇಷಾಧಿಕಾರಿ–ಪೊಲೀಸ್‌ ಕಮೀಷನರ್‌ ಡಾ.ಚಂದ್ರಗುಪ್ತ, ಕಾರ್ಯಾಧ್ಯಕ್ಷ–ಡಿಸಿಪಿ ಪ್ರದೀಪ್‌ ಗುಂಟಿ, ಕಾರ್ಯದರ್ಶಿ–ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್‌.ಶಶಿಧರ್‌, ಸಮನ್ವಯಕರು–ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ.

ಸಾಂಸ್ಕೃತಿಕ ದಸರಾ: ಉಪ ವಿಶೇಷಾಧಿಕಾರಿ–ಜಿಲ್ಲಾ ಪಂಚಾಯಿತಿ ಸಿಸಿಒ ಎ.ಎಂ.ಯೋಗೀಶ್‌, ಕಾರ್ಯಾಧ್ಯಕ್ಷ– ರಂಗಾಯಣ ಜಂಟಿ ನಿರ್ದೇಶಕ ಎ.ಎನ್‌.ಮಲ್ಲಿಕಾರ್ಜುನ, ಕಾರ್ಯದರ್ಶಿ–ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ, ಸಮನ್ವಯಕ–ಅರಮನೆ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ.

ಸ್ವಚ್ಛತೆ ಮತ್ತು ವ್ಯವಸ್ಥೆ: ಉಪ ವಿಶೇಷಾಧಿಕಾರಿ–ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಕಾರ್ಯಾಧ್ಯಕ್ಷ–ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್‌, ಕಾರ್ಯದರ್ಶಿ– ಆರೋಗ್ಯಾಧಿಕಾರಿ ಡಾ.ಕೆ.ಹೇಮಂತರಾಜು.

ಸ್ತಬ್ಧಚಿತ್ರ: ಉಪವಿಶೇಷಾಧಿಕಾರಿ–ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್‌, ಕಾರ್ಯಾಧ್ಯಕ್ಷ– ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಟಿ.ಕೆ.ಲಿಂಗರಾಜು, ಕಾರ್ಯದರ್ಶಿ–ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕಿ ಮೇಘನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT