ಪ್ರೇಮಿಗಳ ಆತ್ಮಹತ್ಯೆ

7

ಪ್ರೇಮಿಗಳ ಆತ್ಮಹತ್ಯೆ

Published:
Updated:

ಮೈಸೂರು: ಕೆ.ಆರ್.ನಗರದ ಭೇರ್ಯ ಗ್ರಾಮದ ಅಶೋಕ್ (27) ಹಾಗೂ ಕಾವ್ಯಶ್ರೀ (22) ಕೆಆರ್‌ಎಸ್‌ ಹಿನ್ನೀರಿನ ಸಾಗರಕಟ್ಟೆ ಬಳಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಶವಗಳು ಒಬ್ಬರಿಗೊಬ್ಬರು ವೇಲ್‌ ಬಿಗಿದುಕೊಂಡ ಸ್ಥಿತಿಯಲ್ಲಿ ಹಿನ್ನೀರಿನಲ್ಲಿ ಪತ್ತೆಯಾಗಿವೆ.

ಅಶೋಕ್ ಇಲ್ಲಿನ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿದ್ದರು. ಕಾವ್ಯಶ್ರೀ ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದರು. ಬುಧವಾರ ಕಾಲೇಜಿಗೆ ತೆರಳುವುದಾಗಿ ಹೇಳಿ ಹೊರಟವರು ಮನೆಗೆ ಹಿಂದಿರುಗಿರಲಿಲ್ಲ. ಈ ಕುರಿತು ಅವರ ಪೋಷಕರು ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದಿನವೇ ಅಶೋಕ್ ಸಹ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರಲಿಲ್ಲ. ಇಬ್ಬರ ದೇಹಗಳೂ ಕೊಳೆತ ಸ್ಥಿತಿಯಲ್ಲಿವೆ. ಇಬ್ಬರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ಇಲವಾಲ ಠಾಣೆಯಲ್ಲಿ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !