ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಕಚ್ಚಿದರೆ ಚುಚ್ಚುಮದ್ದು ಎಲ್ಲಿ?

Last Updated 26 ಮೇ 2019, 19:34 IST
ಅಕ್ಷರ ಗಾತ್ರ

ಮೈಸೂರು: ಒಂದು ವೇಳೆ ನಾಯಿ ಕಚ್ಚಿದರೆ ನಿರ್ಲಕ್ಷಿಸದೇ ಕಡ್ಡಾಯವಾಗಿ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದನ್ನು ತೆಗೆದುಕೊಳ್ಳಲೇಬೇಕು. ಕಚ್ಚಿದ ನಾಯಿಗೆ ರೇಬಿಸ್ ಸೋಂಕಿದ್ದರೆ ರೇಬಿಸ್ ರೋಗ ಬರುವುದು ಖಚಿತ.

ಒಮ್ಮೆ ರೇಬಿಸ್ ರೋಗ ಬಂದಿತೆಂದರೆ ಬದುಕುಳಿಯುವುದು ಸಾಧ್ಯವೇ ಇಲ್ಲ. ಇದುವರೆಗೆ ಪ್ರಪಂಚದಲ್ಲಿ ಕೇವಲ ಇಬ್ಬರಷ್ಟೇ ಬದುಕುಳಿದಿದ್ದಾರೆ. ಸೋಂಕು ತಗುಲಿದ ಹತ್ತೇ ದಿನಗಳಲ್ಲಿ ರೇಬಿಸ್ ಕಾಯಿಲೆ ಬರುತ್ತದೆ.

ಬೀದಿ ನಾಯಿ ಕಚ್ಚಿದ ತಕ್ಷಣ ಡಿಟರ್ಜೆಂಟ್ ಸೋಪಿನಲ್ಲಿ ಗಾಯವನ್ನು ಚೆನ್ನಾಗಿ ತೊಳೆಯಬೇಕು. ನಂತರ, ಆಸ್ಪತ್ರೆಗೆ ಹೋಗಿ ವೈದ್ಯರು ಹೇಳಿದ ರೀತಿ ಚುಚ್ಚುಮದ್ದನ್ನು ಹಾಕಿಸಲೇಬೇಕು.

ಎರಡು ಬಗೆಯ ಚುಚ್ಚುಮದ್ದು:

ನಾಯಿ ಕಡಿತಕ್ಕೆ ಒಳಗಾದರೆ ಒಟ್ಟು 2 ಬಗೆಯ ಚುಚ್ಚುಮದ್ದುಗಳಿವೆ. ಸಾಕಿದ ನಾಯಿ ಅಥವಾ ಈಗಾಗಲೇ ರೇಬಿಸ್ ನಿರೋಧಕ ಲಸಿಕೆ ಹಾಕಿಸಿಕೊಂಡ ನಾಯಿಗಳು ಕಾಲಿಗೆ ಕಚ್ಚಿದರೆ ‘ಆ್ಯಂಟಿ ರೇಬಿಸ್ ವ್ಯಾಕ್ಸಿನ್’ ಸಾಕು ಎಂದು ವೈದ್ಯರು ಹೇಳುತ್ತಾರೆ. ಆದರೆ, ಸಾಕಿರದ ಯಾವುದೇ ನಾಯಿ ಕಚ್ಚಿದರೆ, ಕುತ್ತಿಗೆ, ಮುಖ, ತೋಳು, ಕೈ ಹೀಗೆ ಮಿದುಳಿಗೆ ಹತ್ತಿರ ಇರುವ ಜಾಗಗಳಿಗೆ ಕಚ್ಚಿದರೆ ‘ಹಿಮೊನೊಗ್ಲೋಬಿನ್’ ಚುಚ್ಚುಮದ್ದೇ ಬೇಕು ಎಂದು ಸಲಹೆ ನೀಡುತ್ತಾರೆ.

‘ಕೆ.ಆರ್.ಆಸ್ಪತ್ರೆಯಲ್ಲಿ ಈ ಬಗೆಯ ಚುಚ್ಚುಮದ್ದು ಖಾಲಿಯಾಗಿದೆ. ಕೆಆರ್‌ಎಸ್‌ ರಸ್ತೆಯಲ್ಲಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ (ಇ.ಡಿ ಆಸ್ಪತ್ರೆ)ಯಲ್ಲಿ ಚುಚ್ಚುಮದ್ದು ಲಭ್ಯವಿದೆ. ಬಿಪಿಎಲ್ ಪಡಿತರ ಚೀಟಿ ಇದ್ದರೆ ಉಚಿತ, ಎಪಿಎಲ್ ಪಡಿತರ ಚೀಟಿ ಇದ್ದರೆ ₹ 100ನ್ನು ನೀಡಬೇಕಾಗುತ್ತದೆ’ ಎಂದು ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್ ಹೇಳುತ್ತಾರೆ.

‘₹ 40 ಸಾವಿರದಷ್ಟು ಮೌಲ್ಯದ ಚುಚ್ಚುಮದ್ದು ಒಂದು ವಾರದಲ್ಲಿ ಮುಗಿದು ಹೋಗುತ್ತದೆ. ಹೊಸದಾಗಿ ತರಿಸಲು ಕೆ.ಆರ್.ಆಸ್ಪತ್ರೆಯಿಂದ ಟೆಂಡರ್ ಕರೆಯಲಾಗಿದೆ’ ಎಂದು ಅವರು ತಿಳಿಸುತ್ತಾರೆ. ಉಳಿದಂತೆ, ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಚುಚ್ಚುಮದ್ದುಗಳು ಲಭ್ಯವಿವೆಯಾದರೂ ಅವುಗಳಿಗೆ ಹಣ ತೆರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT