ಮಂಗಳವಾರ, ನವೆಂಬರ್ 19, 2019
25 °C

ಅಂಬರೀಷ್ ಅಣ್ಣ ಆನಂದ್‌ ಕುಮಾರ್‌ ನಿಧನ

Published:
Updated:
Prajavani

ಮೈಸೂರು: ಅಂಬರೀಷ್ ಅವರ ಅಣ್ಣ ಎಂ.ಎಚ್.ಆನಂದ್ ಕುಮಾರ್(76) ಅವರು ಶನಿವಾರ ಮೈಸೂರಿನಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲಿದ್ದ ಅವರನ್ನು ಶುಕ್ರವಾರ ರಾತ್ರಿ ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಾಮರಾಜಪುರಂನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಮೆರಿಕದಲ್ಲಿರುವ ಮಗ ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ಅಂಬರೀಷ್‌ ಅವರು ಕಳೆದ ವರ್ಷ ನವೆಂಬರ್‌ 24 ರಂದು ನಿಧನರಾಗಿದ್ದರು.

ಪ್ರತಿಕ್ರಿಯಿಸಿ (+)