ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು-ಬೇಸಿಗೆ ಹಂಗಾಮು: ಬೆಳೆ ವಿಮೆಗೆ ಅಧಿಸೂಚನೆ

Last Updated 22 ಅಕ್ಟೋಬರ್ 2020, 8:40 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2020ರ ಹಿಂಗಾರು-ಬೇಸಿಗೆ ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ, ಜಿಲ್ಲೆಯ ವ್ಯಾಪ್ತಿಯಲ್ಲಿ 10 ಬೆಳೆಗಳನ್ನು ಬೆಳೆ ವಿಮೆಗೆ ಒಳಪಡಿಸಿ ಅಧಿಸೂಚನೆ ಹೊರಡಿಸಿದೆ.

ಹಿಂಗಾರು ಹಂಗಾಮಿಗೆ ಮಳೆಯಾಶ್ರಿತದ ಐದು ಬೆಳೆಗಳು, ನೀರಾವರಿಯ 2 ಬೆಳೆಗಳು, 1 ತರಕಾರಿ ಬೆಳೆ ಹಾಗೂ ಬೇಸಿಗೆ ಹಂಗಾಮಿನ 2 ನೀರಾವರಿ ಬೆಳೆಗಳಿಗೆ ವಿಮಾ ಯೋಜನೆ ಅಳವಡಿಸಿದೆ.

ರೈತರು ಆಹಾರ ಧಾನ್ಯದ ಬೆಳೆಗಳಿಗೆ ವಿಮಾ ಮೊತ್ತದ ಶೇ 1.5ರಷ್ಟು ಹಾಗೂ ತೋಟಗಾರಿಕೆ ಬೆಳೆಗಳಿಗೆ ಶೇ 5ರಷ್ಟು ವಿಮಾ ಕಂತು ಪಾವತಿಸಬೇಕಿದೆ.

ರೈತರು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಲು ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ (ಪಹಣಿ, ಆಧಾರ್‌ ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಪ್ರತಿ) ತಮ್ಮ ಸಮೀಪದ ಬ್ಯಾಂಕ್ ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ತೆರಳಿ ನಿರ್ದಿಷ್ಟ ವಿಮಾ ಕಂತನ್ನು ಪಾವತಿಸಬಹುದಾಗಿದೆ.

ಹಿಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತವಾಗಿ ಬೆಳೆದ ಕಡಲೆ, ಹುರುಳಿ, ರಾಗಿ, ಟೊಮೆಟೊ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ನ.30ರಂದು ಕೊನೆ ದಿನ.

ನೀರಾವರಿಯಲ್ಲಿ ಬೆಳೆದ ಜೋಳ, ಮುಸುಕಿನಜೋಳ, ರಾಗಿ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ಡಿ.16 ಕೊನೆ ದಿನ. ಬೇಸಿಗೆ ಹಂಗಾಮಿನಲ್ಲಿ ನೀರಾವರಿಯಲ್ಲಿ ಬೆಳೆದ ಭತ್ತ, ರಾಗಿ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು 2021ರ ಮಾರ್ಚ್ 1 ಕೊನೆ ದಿನವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT