ಶುಕ್ರವಾರ, ಜುಲೈ 23, 2021
23 °C

ಟೈಮ್ಸ್‌ ರ‍್ಯಾಂಕಿಂಗ್‌: ಮೈಸೂರು ವಿ.ವಿಗೆ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕಿಂಗ್‌ ನೀಡುವ ಜಾಗತಿಕ ಸಂಸ್ಥೆಯಾದ ಟೈಮ್ಸ್‌ ಹೈಯರ್‌ ಎಜುಕೇಷನ್‌ ಪ್ರಕಟಿಸಿರುವ ಶ್ರೇಯಾಂಕ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯ ಈ ಬಾರಿಯೂ ‘1000 ಪ್ಲಸ್’ ಸ್ಥಾನವನ್ನು ಪಡೆದುಕೊಂಡಿದೆ.

ಮೈಸೂರು ವಿ.ವಿ. 2018 ರಿಂದಲೂ ಈ ಶ್ರೇಯಾಂಕವನ್ನು ಉಳಿಸಿಕೊಂಡು ಬಂದಿದೆ. ಈ ವರ್ಷ ರಾಜ್ಯದ ವಿ.ವಿಗಳಲ್ಲಿ ಮೈಸೂರು ವಿ.ವಿ ಅಗ್ರಸ್ಥಾನ ಗಳಿಸಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಒಟ್ಟು 35 ವಿ.ವಿಗಳು ಮಾತ್ರ ‘1000 ಪ್ಲಸ್’ ಶ್ರೇಯಾಂಕ ಪಡೆದುಕೊಂಡಿವೆ. ಈ ಬಾರಿ ವಿಶ್ವದ 92 ದೇಶಗಳ 1,400 ಕ್ಕೂ ಅಧಿಕ ವಿ.ವಿಗಳು ಸ್ಪರ್ಧೆಯಲ್ಲಿದ್ದವು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.