ತೋಟಗಾರಿಕಾ ಸಹಾಯಕರಿಗೆ ಬಡ್ತಿ ಬೇಡ

7
ಕೃಷಿ ಶಿಕ್ಷಣವನ್ನು ಖಾಸಗೀಕರಣ ಮಾಡದಂತೆ ವಿದ್ಯಾರ್ಥಿಗಳ ಮನವಿ

ತೋಟಗಾರಿಕಾ ಸಹಾಯಕರಿಗೆ ಬಡ್ತಿ ಬೇಡ

Published:
Updated:
ಮೈಸೂರಿನಲ್ಲಿ ತೋಟಗಾರಿಕಾ ಪದವಿ ವಿದ್ಯಾರ್ಥಿಗಳು ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳನ್ನು ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ ನೀಡಬಾರದು ಎಂದು ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದರು

ಮೈಸೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಇರುವ ತೋಟಗಾರಿಕೆ ಸಹಾಯಕರಿಗೆ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಬಡ್ತಿ ನೀಡುತ್ತಿರುವುದು ಖಂಡನೀಯ ಎಂದು ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

‘ಪಿಯುಸಿ ಉತ್ತೀರ್ಣರಾಗಿ ಸಿಇಟಿಯಲ್ಲಿ ರ‍್ಯಾಂಕ್‌ ಗಳಿಸಿ ತೋಟಗಾರಿಕಾ ಕಾಲೇಜುಗಳಲ್ಲಿ ಸೀಟು ಪಡೆದಿರುತ್ತೇವೆ. 3 ವರ್ಷಗಳ ಕಾಲ ಅಧ್ಯಯನ ನಡೆಸಿ ಪದವಿ ಪಡೆದ ನಮಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಉದ್ಯೋಗ ನೀಡಬೇಕೇ ಹೊರತು, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ ಬಡ್ತಿ ನೀಡುವ ಮೂಲಕ ನಮಗೆ ಮೋಸ ಮಾಡಬಾರದು’ ಎಂದು ಒತ್ತಾಯಿಸಿದರು.

‘ಹಿಂದಿನ ಕಾಲದಲ್ಲಿ ಕೃಷಿ ವಿಶ್ವವಿದ್ಯಾಲಯ ಇಲ್ಲದಿದ್ದಾಗ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳನ್ನು ತುಂಬಲು ಅನಿವಾರ್ಯವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಇರುವ ತೋಟಗಾರಿಕೆ ಸಹಾಯಕರಿಗೆ ನೀಡಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಹೆಚ್ಚಿನ ವಿದ್ಯಾರ್ಹತೆ ಇರುವ ಪದವೀಧರರು ಹೊರಬರುತ್ತಿದ್ದಾರೆ. ಅವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕಾದ್ದು ಸರ್ಕಾರದ ಕೆಲಸ’ ಎಂದು ಮನವಿ ಮಾಡಿದರು.

ಅಲ್ಲದೇ, ಕೃಷಿ ಶಿಕ್ಷಣವನ್ನು ಖಾಸಗೀಕರಣಗೊಳಿಸ ಹೊರಟಿರುವುದು ದೊಡ್ಡ ಹುನ್ನಾರ. ಇದರಿಂದ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ಪಡೆಯುವುದು ತಪ್ಪಿಹೋದಂತೆ ಆಗುತ್ತದೆ. ಕೃಷಿ ಬಡವರ ಆಸ್ತಿ. ಅದನ್ನು ಕಿತ್ತುಕೊಂಡು ಶ್ರೀಮಂತರಿಗೆ ನೀಡುವ ಪ್ರಯತ್ನ ಸರಿಯಲ್ಲ ಎಂದು ಟೀಕಿಸಿದರು.

ವಿದ್ಯಾರ್ಥಿ ಮುಖಂಡರಾದ ಕೀರ್ತಿ ಶಂಕರ್, ಕಿರಣ್, ಅಂಬರೀಷ, ಸಂಜಯ್‌ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !