ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಪರೇಷನ್ ಫಾಸ್ಟ್‌ಟ್ರಾಕ್‌’ನಲ್ಲಿ ಸಿಕ್ಕಿ ಬಿದ್ದ ಸರಗಳ್ಳರು

ಮೇಟಗಳ್ಳಿ ಮತ್ತು ನರಸಿಂಹರಾಜ ಠಾಣಾ ಪೊಲೀಸರ ಕಾರ್ಯಾಚರಣೆ
Last Updated 21 ಮೇ 2019, 13:36 IST
ಅಕ್ಷರ ಗಾತ್ರ

ಮೈಸೂರು: ಸರಗಳ್ಳತನ ತಡೆಯಲು ನಗರ ಪೊಲೀಸರು ಆರಂಭಿಸಿರುವ ‘ಆಪರೇಷನ್ ಫಾಸ್ಟ್‌ಟ್ರಾಕ್’ಗೆ ಇಬ್ಬರು ಸರಗಳ್ಳರು ಸಿಕ್ಕಿ ಬಿದ್ದಿದ್ದಾರೆ.

ಆರ್.ಎಸ್.ನಾಯ್ಡು ನಗರದ ನಿವಾಸಿ ಸನ್ನಿ ಡೊನಾಲ್ಡ್ (26) ಹಾಗೂ ಕೆಸರೆಯ ರಾಜೇಂದ್ರನಗರದ ನಿವಾಸಿ ಅಖೀಲೇಶ್ ಸಿ.ಗೌಡ (19) ಬಂಧಿತರು. ಇವರಿಂದ ₹ 1.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ:

ಸರಗಳ್ಳತನ ತಡೆಗೆ ಮೇಟಗಳ್ಳಿ ಮತ್ತು ನರಸಿಂಹರಾಜ ಠಾಣೆಯ ಪೊಲೀಸರು ಜಂಟಿಯಾಗಿ ‘ಆಪರೇಷನ್ ಫಾಸ್ಟ್‌ಟ್ರಾಕ್’ ಕಾರ್ಯಾಚರಣೆ ಆರಂಭಿಸಿದ್ದರು. 2 ಬೈಕ್‌ಗಳಲ್ಲಿ ಅತಿವೇಗವಾಗಿ ಬಂದ ನಾಲ್ವರು ಆರೋಪಿಗಳನ್ನು ನಿಲ್ಲಿಸಲು ಸೂಚಿಸಿದಾಗ ಅವರು ಪರಾರಿಯಾದರು. ಅನುಮಾನಗೊಂಡ ಪೊಲೀಸರು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ 2 ದ್ವಿಚಕ್ರ ವಾಹನಗಳನ್ನು ಹಾಗೂ ಮಹಿಳೆಯೊಬ್ಬರಿಂದ ಸರವನ್ನು ಕಳವು ಮಾಡಲಾಗಿದೆ ಎಂದು ಒಪ್ಪಿಕೊಂಡರು. ಆರೋಪಿಗಳ ಪೈಕಿ ಇಬ್ಬರು ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ನಗರ ಸರಸ್ವತಿಪುರಂ, ಮೇಟಗಳ್ಳಿ, ಆಲನಹಳ್ಳಿ ಠಾಣೆಯ ಒಂದೊಂದು ಸರಗಳವು ಪ್ರಕರಣಗಳು ಹಾಗೂ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಒಂದು ವಾಹನ ಕಳವು ಪ್ರಕರಣಗಳು ಪತ್ತೆಯಾದಂತಾಗಿದೆ.

ಮೇಟಗಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರಗೌಡ, ಪಿಎಸ್‌ಐ ವಿಶ್ವನಾಥ್, ಸಿಬ್ಬಂದಿಯಾದ ಮನು, ಕೃಷ್ಣ, ಹನುಮಂತ್ ಕಲ್ಲೇದ್, ರಮೇಶ್, ಸುನಿಲ್ ಹಾಗೂ ಆಶಾ ಕಾರ್ಯಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT