ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟ: ರೋಪ್ ವೇ ವಿರೋಧಿಸಿ ಪ್ರತಿಭಟನೆ

Last Updated 8 ಮಾರ್ಚ್ 2022, 8:01 IST
ಅಕ್ಷರ ಗಾತ್ರ

ಮೈಸೂರು: ರೋಪ್‌ ವೇ ವಿರೋಧಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಇಲ್ಲಿನ ಚಾಮುಂಡಿ ಬೆಟ್ಟದ ಪಾದದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಈ ಯೋಜನೆಯಿಂದ ಬೆಟ್ಟದ ಪರಿಸರ ಹಾಳಾಗುತ್ತದೆ. ಪ್ರವಾಸೋದ್ಯಮ ಹೆಸರಿನಲ್ಲಿ ಮರಗಿಡಗಳನ್ನು ಕಡಿದು ಹಾಕುವುದು ಸರಿಯಲ್ಲ. ಈ ಯೋಜನೆಯನ್ನು ಕೈಬಿಡಬೇಕು’ ಎಂದು ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಒತ್ತಾಯಿಸಿದರು.

‘ಚಾಮುಂಡಿ ಬೆಟ್ಟ ಕೇವಲ ಪುಣ್ಯಕ್ಷೇತ್ರವಲ್ಲ. ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿರುವ ಜೀವ ವೈವಿಧ್ಯತೆಯ ತಾಣ. ಇದನ್ನು ಕಾಪಾಡಿಕೊಂಡು ಹಾಗೂ ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯೇ ಹೊರತು ರೋಪ್‌ ವೇ ನಿರ್ಮಿಸುವುದು ಅಲ್ಲ’ ಎಂದು ಹೇಳಿದರು.

ಇನ್ಯಾದರೂ, ಜಿಲ್ಲಾಡಳಿತ ಎಚ್ಚೆತ್ತು ಚಾಮುಂಡಿ ಬೆಟ್ಟವನ್ನು ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿಸಬೇಕು. ಈ ಮೂಲಕ ಬೆಟ್ಟದ ಪರಿಸರ ಅಭಿವೃದ್ದಿಗೆ ಒತ್ತನ್ನು ಕೊಟ್ಟು ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರಕ್ಕೆ ಪೂರಕ ಕಾರ್ಯಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT