ರೈಲ್ವೆ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳರ ಬಂಧನ

ಶನಿವಾರ, ಮೇ 25, 2019
32 °C
ಹಾಸನ ರೈಲು ನಿಲ್ದಾಣದ ವಾಹನ ನಿಲುಗಡೆ ಸ್ಥಳದಲ್ಲಿ ಆರೋಪಿಗಳು ಬಲೆಗೆ

ರೈಲ್ವೆ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳರ ಬಂಧನ

Published:
Updated:
Prajavani

ಮೈಸೂರು ನಗರ ಗ್ರಾಮಾಂತರ ಮತ್ತು ಹಾಸನ ಆವೃತ್ತಿಗಳಿಗೆ...

ಮೈಸೂರು: ಹಾಸನ ರೈಲು ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಇಬ್ಬರು ಬೈಕ್‌ ಕಳ್ಳರನ್ನು ಬಂಧಿಸಿರುವ ಮೈಸೂರು ರೈಲ್ವೆ ಪೊಲೀಸರು ಅವರಿಂದ ₹ 1 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ನೆಲ್ಲಿಗೆರೆ ನಿವಾಸಿ ಎನ್.ಆರ್.ಚಿದಾನಂದ ಮತ್ತು ಹಾಸನ ನಗರದ ನಿವಾಸಿ ಆರ್.ವಿ.ಪ್ರಜ್ವಲ್ ಬಂಧಿತರು.

ಇವರು ಹಾಸನ ರೈಲು ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ರೈಲ್ವೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಹಾಸನ ನಗರದ ವಿವಿಧೆಡೆ ಇರುವ ವಾಹನ ನಿಲುಗಡೆ ಪ್ರದೇಶಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿರುವುದಾಗಿ ಇವರು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ರೈಲುಗಳಲ್ಲಿ ಕಳವು ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದ್ದರಿಂದ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಎಸ್.ಗುಳೇದ ಹಾಗೂ ಡಿವೈಎಸ್‌ಪಿ ಶ್ರೀನಿವಾಸರೆಡ್ಡಿ ಅವರು ಮೈಸೂರು ರೈಲ್ವೆ ವೃತ್ತದ ಪೊಲೀಸ್‌ ಇನ್‌ಸ್ಪೆಕ್ಟರ್ ಎನ್.ಜಯಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿದ್ದರು.

ಪಿಎಸ್ಐ ಆರ್‌.ಜಗದೀಶ್, ಸಿಬ್ಬಂದಿಯಾದ ಡಿ.ಆರ್.ಸುರೇಶ್, ಡಿ.ವಿ.ದೇವರಾಜೇಗೌಡ, ಕೆ.ಪಿ.ಮೋಹನ್, ಬಿ.ರಾಮೇಶಾಚಾರಿ, ಪಿ.ಫಯಾಜ್‌ಖಾನ್, ಎಲ್.ಎಚ್.ಮಂಜುನಾಥ್, ಬಿ.ಎಸ್.ಮೋಹನ್, ಸಿ.ಟಿ.ಮಧು, ಸಿ.ಎನ್.ಚೇತನ್, ಆರ್.ಪ್ರಶಾಂತ್, ರಘು, ಯತೀಶ ಕಾರ್ಯಾಚರಣೆ ತಂಡದಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !