ಮೈಸೂರು: ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಐ.ಕೆ.ಪಾಂಡೆ ಅವರು ಸಂಸದ ಪ್ರತಾಪ ಸಿಂಹ ಹಾಗೂ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಜತೆ ಮೈಸೂರು ರಿಂಗ್ ರಸ್ತೆಯನ್ನು ಶನಿವಾರ ಪರಿಶೀಲಿಸಿದರು.

ರಿಂಗ್ ರಸ್ತೆಯಲ್ಲಿರುವ ಅಪಘಾತ ವಲಯಗಳನ್ನು ಇಲ್ಲವಾಗಿಸುವುದು, ಕೆ.ಆರ್.ಎಸ್ ರಸ್ತೆಗೆ (ರಾಯಲ್ ಇನ್ ಹೋಟೆಲ್ ಬಳಿ) ಮೇಲು ಸೇತುವೆ ನಿರ್ಮಾಣ ಹಾಗೂ ರಿಂಗ್ ರಸ್ತೆಯ ನಾಲ್ಕು ಕಡೆ ಇರುವ ರೈಲ್ವೆ ಹಳಿಗಳಿಗೆ ಕೆಳ ಸೇತುವೆ ನಿರ್ಮಾಣದ ಬಗ್ಗೆ ಈ ವೇಳೆ ಚರ್ಚಿಸಲಾಯಿತು.

ರಿಂಗ್ ರಸ್ತೆಯಲ್ಲಿ ಪ್ರಯಾಣ ಇನ್ನಷ್ಟು ಸುಗಮವನ್ನಾಗಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವುದಾಗಿ ಪಾಂಡೆ ಅವರು ಭರವಸೆ ನೀಡಿದರು.

ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಮನವಿ: ಮೈಸೂರು ಹೊರವರ್ತುಲ ರಸ್ತೆಯು ದಶಕದ ಹಿಂದೆ ನಿರ್ಮಾಣವಾಗಿದ್ದು ಈ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳು ಕೂಡುವುದರಿಂದ ಟ್ರಾಫಿಕ್ ದಟ್ಟಣೆ ಜಾಸ್ತಿಯಾಗಿದೆ. ಆದ್ದರಿಂದ ಮೈಸೂರಿಗೆ ಪೆರಿಫೆರಲ್ ರಿಂಗ್ ರಸ್ತೆಯ ಅಗತ್ಯವಿದೆ ಎಂದು ರಾಜೀವ್ ಅವರು ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 104 ಕಿಲೊ ಮೀಟರ್ ಉದ್ದದ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ‘ಮಹಾಯೋಜನೆ 2031’ರಲ್ಲಿ ಈಗಾಗಲೇ ಅಂದಾಜು 400 ಎಕರೆ ಭೂಮಿಯನ್ನು ಗುರುತಿಸಿದೆ. ಇನ್ನೂ 600 ಎಕರೆ ಭೂಮಿಯ ಅವಶ್ಯಕತೆಯಿದೆ. ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ವತಿಯಿಂದ ಭೂಸ್ವಾಧೀನ ವೆಚ್ಚ ಸೇರಿದಂತೆ ಅಗತ್ಯ ಅನುದಾನ ಒದಗಿಸುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.