ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಶ್ರಾವಣ ಪ್ರವಚನ ಇಂದಿನಿಂದ

Last Updated 20 ಜುಲೈ 2020, 16:34 IST
ಅಕ್ಷರ ಗಾತ್ರ

ಮೈಸೂರು: ಸುತ್ತೂರು ಶ್ರೀಕ್ಷೇತ್ರ ಹಾಗೂ ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನವನ್ನು ಪ್ರತಿ ವರ್ಷವೂ ಸಂಪ್ರದಾಯದಂತೆ ನಡೆಸಲಾಗುತ್ತಿತ್ತು. ಆದರೆ ಪ್ರಸ್ತುತ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ, ಮೈಸೂರಿನಲ್ಲಿರುವ ಶಾಖಾ ಮಠದಿಂದ ಆನ್‍ಲೈನ್ ಮೂಲಕ ಪ್ರವಚನ ಆಯೋಜಿಸಲಾಗಿದೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಜುಲೈ 21ರಿಂದ ಆಗಸ್ಟ್ 19ರವರೆಗೆ ಪ್ರತಿ ದಿನ ಸಂಜೆ ‘ವಚನ ಚಿಂತನ’ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ. ಸಂಜೆ 6.30ಕ್ಕೆ ಪ್ರಾರ್ಥನೆ, 6.45ಕ್ಕೆ ಪ್ರವಚನ, 7.15ಕ್ಕೆ ಶಾಂತಿ ಮಂತ್ರ ಮತ್ತು ಮಹಾಮಂಗಳಾರತಿ ನಡೆಯಲಿದೆ.

ಯಥಾಪ್ರಕಾರ ವಿಶೇಷ ಪೂಜೆ ಹಾಗೂ ಪೂಜಾನುಷ್ಠಾನಗಳನ್ನು ಸುತ್ತೂರು ಶ್ರೀಕ್ಷೇತ್ರದಲ್ಲಿನ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆ ಮತ್ತು ಕ್ಷೇತ್ರದ ಎಲ್ಲ ದೇವಸ್ಥಾನಗಳು ಹಾಗೂ ಮೈಸೂರಿನ ಶ್ರೀಮಠದಲ್ಲಿ ನೆರವೇರಿಸಲಾಗುವುದು. ಶ್ರೀಮಠದ ಸೇವಾ ಸಿಬ್ಬಂದಿ ಮಾತ್ರ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಭಕ್ತಾದಿಗಳು ಹಾಗೂ ಸಾರ್ವಜನಿಕರು ಪ್ರವಚನ ಮತ್ತು ಈ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವಂತಿಲ್ಲ. http://Youtube.com/c/JSSMahavidyapeethaonline, https://www.facebook.com/JSSMVP ಮತ್ತು www.jssonline.org ಜಾಲತಾಣಗಳ ಮೂಲಕ ವೀಕ್ಷಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT