ಮಂಗಳವಾರ, ಮೇ 18, 2021
24 °C

16ರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ರೈಲು ಯಾರ್ಡ್ ಹಾಗೂ ಚಾಮರಾಜನಗರ ಮುಖ್ಯ ಮಾರ್ಗದಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂನ್ 16ರಿಂದ 24ರವರೆಗೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

16ರಿಂದ 23ರವರೆಗೆ ಚಾಮರಾಜ ನಗರ – ಮೈಸೂರು ಪ್ಯಾಸೆಂಜರ್ (56201), ಮೈಸೂರು – ಯಶವಂತಪುರ ಪ್ಯಾಸೆಂಜರ್ (56216) ಯಶವಂತ‍ಪುರ – ಸೇಲಂ ಪ್ಯಾಸೆಂಜರ್ (56242), ಮೈಸೂರು – ಚಾಮರಾಜನಗರ ಪ್ಯಾಸೆಂಜರ್ (56202), ಚಾಮರಾಜನಗರ – ಕೆಎಸ್‌ಆರ್‌ ಬೆಂಗಳೂರು ಪ್ಯಾಸೆಂಜರ್ (56281), ಕೆಎಸ್‌ಆರ್‌ ಬೆಂಗಳೂರು – ಶಿವಮೊಗ್ಗ ಪ್ಯಾಸೆಂಜರ್‌ (56227), ಮೈಸೂರು– ಕೆಎಸ್‌ಆರ್‌ ಬೆಂಗಳೂರು ಪ್ಯಾಸೆಂಜರ್ (56231), ಕೆಎಸ್‌ಆರ್‌ ಬೆಂಗಳೂರು – ಮೈಸೂರು ಪ್ಯಾಸೆಂಜರ್ (56238), ಮೈಸೂರು – ಚಾಮರಾಜನಗರ ಪ್ಯಾಸೆಂಜರ್‌ (56204), ಚಾಮರಾಜನಗರ – ಮೈಸೂರು ಪ್ಯಾಸೆಂಜರ್ (56203), ಮೈಸೂರು – ಕೆಎಸ್‌ಆರ್‌ ಬೆಂಗಳೂರು (56237), ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್‌ (56223), ಮೈಸೂರು – ತಾಳಗುಪ್ಪ ಪ್ಯಾಸೆಂಜರ್ (56276), ಮೈಸೂರು – ಚಾಮರಾಜನಗರ ಪ್ಯಾಸೆಂಜರ್ (56208), ಚಾಮರಾಜನಗರ – ಮೈಸೂರು ಪ್ಯಾಸೆಂಜರ್ (56209), ಮೈಸೂರು – ನಂಜನಗೂಡು ಪ್ಯಾಸೆಂಜರ್‌ (56206), ನಂಜನಗೂಡು – ಮೈಸೂರು ಪ್ಯಾಸೆಂಜರ್ (56205), ಮಾಲ್ಗುಡಿ ಎಕ್ಸ್‌ಪ್ರೆಸ್‌ ಮೈಸೂರು – ಯಲಹಂಕ (16023), ಮಾಲ್ಗುಡಿ ಎಕ್ಸ್‌ಪ್ರೆಸ್‌ ಯಲಹಂಕ – ಮೈಸೂರು (16024), ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ಮೈಸೂರು – ಕೆಎಸ್‌ಆರ್‌ ಬೆಂಗಳೂರು (16557), ರಾಜ್ಯರಾಣಿ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು– ಮೈಸೂರು (16558) ರದ್ದಾಗಿವೆ.

17ರಿಂದ 24ರವರೆಗೆ ಸೇಲಂ– ಯಶವಂತಪುರ ಪ್ಯಾಸೆಂಜರ್ (56241), ಯಶವಂತಪುರ – ಮೈಸೂರು ಪ್ಯಾಸೆಂಜರ್ (56215), ಶಿವಮೊಗ್ಗ– ಕೆಎಸ್‌ಆರ್‌ ಪ್ಯಾಸೆಂಜರ್‌ (56228), ಕೆಎಸ್ಆರ್‌ ಬೆಂಗಳೂರು– ಚಾಮರಾಜನಗರ ಪ್ಯಾಸೆಂಜರ್‌ (56282), ಅರಸೀಕೆರೆ – ಕೆಎಸ್‌ಆರ್‌ ಬೆಂಗಳೂರು ಪ್ಯಾಸೆಂಜರ್ (56224), ಕೆಎಸ್ಆರ್‌ ಬೆಂಗಳೂರು – ಮೈಸೂರು ಪ್ಯಾಸೆಂಜರ್‌ (56232), ತಾಳಗುಪ್ಪ – ಮೈಸೂರು ಪ್ಯಾಸೆಂಜರ್‌ (56275) ಸಂಚಾರ ಇರುವುದಿಲ್ಲ.

ಜೂನ್‌ 21ರಂದು ಮೈಸೂರು – ರೇನಿಗುಂಟಾ ಎಕ್ಸ್‌ಪ್ರೆಸ್‌ (11065), 22ರಂದು ರೇನಿಗುಂಟಾ – ಮೈಸೂರು ಎಕ್ಸ್‌ಪ್ರೆಸ್ (11066) ರದ್ದಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು