ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಪ್ರಕರಣ; ಇಬ್ಬರು ಆತ್ಮಹತ್ಯೆ

‌ಕಾರಿಗೆ ಬೆಂಕಿ; ಪ್ರಯಾಣಿಕರು ಪಾರು
Last Updated 18 ನವೆಂಬರ್ 2019, 10:09 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ವರುಣಾ ಹಾಗೂ ಬನ್ನೂರು ಹೋಬಳಿಗಳಲ್ಲಿ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರುಣಾ ಸಮೀಪದ ಬಡಗಲಹುಂಡು ನಿವಾಸಿ ಅನುಪಮಾ (19) ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡಿದ್ದಾರೆ. ಇವರು ಮೈಸೂರಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಪದೇ ಪದೇ ಹದಗೆಡುತ್ತಿದ್ದ ಅನಾರೋಗ್ಯದಿಂದ ಇವರು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭತ್ತಕ್ಕೆ ಬೆಂಕಿ ರೋಗ ಬಂತೆಂದು ಆತ್ಮಹತ್ಯೆ

ಮೈಸೂರು: ಬನ್ನೂರು ಸಮೀಪದ ಮೆಣಸಿಕ್ಯಾತನಹಳ್ಳಿಯ ರೈತ ಕೃಷ್ಣೇಗೌಡ (55) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭತ್ತದ ಬೆಳೆ ಬೆಳೆಯಲು ಇವರು ಸಾಲ ಮಾಡಿದ್ದರು. ಆದರೆ, ಭತ್ತಕ್ಕೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಇದರಿಂದ ನಷ್ಟವಾಗಿ ಸಾಲ ತೀರಿಸಲು ಆಗುವುದಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರುಣಾ ನಾಲೆಯಲ್ಲಿ ತೇಲಿಕೊಂಡು ಬಂದ ಶವ

ಮೈಸೂರು: ಇಲ್ಲಿನ ಡಿ.ಕಾಟೂರು ಸಮೀಪದ ವರುಣಾ ನಾಲೆಯಲ್ಲಿ 25ರಿಂದ 30 ವರ್ಷ ವಯಸ್ಸಿನ ಪುರುಷ ವ್ಯಕ್ತಿಯ ಶವವೊಂದು ತೇಲಿಕೊಂಡು ಬಂದಿದೆ. ಮೃತದೇಹದ ಬಲಗೈ ಮೇಲೆ ಇಂಗ್ಲಿಷ್‌ನ ‘ಆರ್‌’ ಹಾಗೂ ಎಡಗೈ ಮೇಲೆ ‘ಎ’ ಎಂಬ ಹಚ್ಚೆ ಇದೆ. ತುಂಬುತೋಳಿನ ಅಂಗಿ, ನೀಲಿ ಜೀನ್ಸ್‌ ಪ್ಯಾಂಟ್ ದೇಹದ ಮೇಲಿದೆ. ದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಇವರ ಗುರುತು ಪತ್ತೆಯಾದವರು ಜಯಪುರ ಸಬ್‌ಇನ್‌ಸ್ಪೆಕ್ಟರ್ 948080 5047 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT