ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯಲ್ಲಿದ್ದಾರೆ 1,057 ಶತಾಯುಷಿ ವೋಟರ್ಸ್

Last Updated 1 ಏಪ್ರಿಲ್ 2023, 12:50 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಜಿಲ್ಲೆಯಲ್ಲಿ 80 ವರ್ಷ ಹಾಗೂ 80 ವರ್ಷ ಮೇಲಿನವರು 84,917 ಮಂದಿ ಇದ್ದಾರೆ.

ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 2,905 ಮತಗಟ್ಟೆಗಳಿವೆ. ಮಾರ್ಚ್‌ 29ರ ಅಂತ್ಯದಲ್ಲಿದ್ದಂತೆ, 13,01,022 ಪುರುಷರು ಹಾಗೂ 13,21,316, 13 ತೃತೀಯ ಲಿಂಗಿಗಳು ಸೇರಿ 26,22,551 ಮತದಾರರಿದ್ದಾರೆ. ಇವರಲ್ಲಿ ಹಿರಿಯ ನಾಗರಿಕರನ್ನು, ಯುವ ಮತದಾರರನ್ನು ಹಾಗೂ ಅಂಗವಿಕಲರನ್ನು ಗುರುತಿಸಲಾಗಿದೆ. ‘ನಿವೃತ್ತರ ಸ್ವರ್ಗ’ ಎಂಬ ಹೆಸರನ್ನೂ ಹೊಂದಿರುವ ಮೈಸೂರಿನಲ್ಲಿ ಹಿರಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಸೆಳೆದಿದೆ.

ಅತಿ ಹೆಚ್ಚು ಅಂದರೆ 12,174 ಮಂದಿ ಕೃಷ್ಣರಾಜ ಕ್ಷೇತ್ರದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಚಾಮರಾಜ ಕ್ಷೇತ್ರವಿದೆ. ಅಲ್ಲಿ 9,833 ಮತದಾರರಿದ್ದಾರೆ. ಪಿರಿಯಾಪಟ್ಟಣದಲ್ಲಿ 5,266, ಕೃಷ್ಣರಾಜನಗರದಲ್ಲಿ 6,811, ಹುಣಸೂರಿನಲ್ಲಿ 7,034, ಎಚ್‌.ಡಿ.ಕೋಟೆಯಲ್ಲಿ 6,484, ನಂಜನಗೂಡಿನಲ್ಲಿ 7,572, ಚಾಮುಂಡೇಶ್ವರಿಯಲ್ಲಿ 9,767, ನರಸಿಂಹರಾಜದಲ್ಲಿ 6,368, ವರುಣಾದಲ್ಲಿ 7,615 ಹಾಗೂ ತಿ.ನರಸೀಪುರದಲ್ಲಿ 5,993 ಮತದಾರರು 80 ವರ್ಷ ಹಾಗೂ 80 ವರ್ಷ ಮೇಲಿನವರು ಇದ್ದಾರೆ.

ಅವರಿಗೆ ಮತಗಟ್ಟೆಗಳ ಮಾಹಿತಿಯನ್ನು ಮನೆಗಳಿಗೇ ತಲುಪಿಸಲು ಹಾಗೂ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಂಡಿದೆ ಎನ್ನುತ್ತಾರೆ ಅಧಿಕಾರಿಗಳು.

80 ವರ್ಷ ದಾಟಿದವರು, ಅಂಗವಿಕಲರು, ಅಗತ್ಯ ಸೇವೆಯ ಉದ್ಯೋಗಸ್ಥರು ಹಾಗೂ ಕೋವಿಡ್‌ ಬಾಧಿತರು ಅಂಚೆ ಮತದಾನ (ಮನೆಯಿಂದಲೇ ಮತ ಚಲಾಯಿಸಲು ಅವಕಾಶ) ಮಾಡಲು ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಅಂಚೆ ಮತಪತ್ರದ ಹಕ್ಕು ಚಲಾಯಿಸಲು ಬಯಸುವವರು ‘ನಮೂನೆ 12ಡಿ’ಯಲ್ಲಿ ಅಗತ್ಯವಿರುವ ಎಲ್ಲ ವಿವರಗಳನ್ನು ಒದಗಿಸಬೇಕು ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 80 ವರ್ಷ ದಾಟಿರುವವರನ್ನು ಮತದಾನ ‍ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ವಯೋಸಹಜ ಕಾರಣ ಅಥವಾ ಸಮಸ್ಯೆಗಳಿಂದ ಅವರು ಹಕ್ಕಿನಿಂದ ವಂಚಿತವಾಗಬಾರದು ಎನ್ನುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ.

‘1,057 ಶತಾಯುಷಿಗಳು ಹಾಗೂ 90 ವರ್ಷ ಪೂರೈಸಿರುವ 16,900 ಮತದಾರರಿದ್ದಾರೆ. ಈ ವರ್ಗದ ಮತದಾರರು ಹುಮ್ಮಸ್ಸು ಹಾಗೂ ಸ್ಫೂರ್ತಿಯಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಕೆಲವರು ಹಾಸಿಗೆ ಹಿಡಿದಿದ್ದು, ಅವರಿಂದಲೂ ಮತದಾನ ಮಾಡಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಆನ್‌ಲೈನ್‌ನಲ್ಲಿ ಸಂವಾದ ನಡೆಸಿ ಮಾಹಿತಿ ‍ಪಡೆದಿದ್ದೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

‘ಹಿರಿಯರು ಯುವಜನರಿಗೆ ಪ್ರೇರಣೆಯಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎನ್ನುತ್ತಾರೆ ಅವರು.

ಎಚ್‌.ಡಿ.ಕೋಟೆಯಲ್ಲಿ ಹೆಚ್ಚು ಅಂಗವಿಕಲರು

ಜಿಲ್ಲೆಯಲ್ಲಿ 31,754 ಅಂಗವಿಕಲ ಮತದಾರರಿದ್ದಾರೆ. ಈ ವರ್ಗದವರು ಎಚ್‌.ಡಿ.ಕೋಟೆಯಲ್ಲಿ ಅತಿ ಹೆಚ್ಚು ಅಂದರೆ 3,438 ಇದ್ದಾರೆ. ಅತಿ ಕಡಿಮೆ ಸಂಖ್ಯೆಯಲ್ಲಿರುವುದು ಕೃಷ್ಣರಾಜದಲ್ಲಿ. ಅಲ್ಲಿ 1,436 ಮಂದಿ ಇದ್ದಾರೆ.

ಪಿರಿಯಾಪಟ್ಟಣದಲ್ಲಿ 3,257, ಕೃಷ್ಣರಾಜನಗರದಲ್ಲಿ 3,132, ಹುಣಸೂರಿನಲ್ಲಿ 3.,430, ನಂಜನಗೂಡಿನಲ್ಲಿ 3,107, ಚಾಮುಂಡೇಶ್ವರಿಯಲ್ಲಿ 2,595, ಚಾಮರಾಜದಲ್ಲಿ 2,374, ನರಸಿಂಹರಾಜದಲ್ಲಿ 2,667, ವರುಣಾದಲ್ಲಿ 3,218 ಹಾಗೂ ತಿ.ನರಸೀಪುರದಲ್ಲಿ 3,100 ಅಂಗವಿಕಲ ಮತದಾರರಿದ್ದಾರೆ.

ನೋಂದಾಯಿಸಿರುವ ಒಟ್ಟು ಅಂಗವಿಕಲ ಮತದಾರರಲ್ಲಿ ಪುರುಷರು (17,672) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಯುವ ಮತದಾರರು: ಚಾಮುಂಡೇಶ್ವರಿಯಲ್ಲಿ ಜಾಸ್ತಿ

ಜಿಲ್ಲೆಯಲ್ಲಿ 47,812 ಯುವ ಮತದಾರರಿದ್ದಾರೆ. ಇವರಲ್ಲಿ 17,612 ಮಂದಿ ಇತ್ತೀಚೆಗೆ ನಡೆದ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ನೋಂದಾಯಿಸಿದವರಾಗಿದ್ದಾರೆ.

ಈ ವರ್ಗ ಮತದಾರರು ಜಾಸ್ತಿ ಇರುವುದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ. ಅಲ್ಲಿ 6,068 ಮಂದಿ ಇದ್ದಾರೆ. ಉಳಿದಂತೆ ಪಿರಿಯಾಪಟ್ಟಣದಲ್ಲಿ 4,395, ಕೃಷ್ಣರಾಜನಗರದಲ್ಲಿ 5,170, ಹುಣಸೂರಿನಲ್ಲಿ 5,663, ಎಚ್‌.ಡಿ.ಕೋಟೆಯಲ್ಲಿ 4,253, ನಂಜನಗೂಡಿನಲ್ಲಿ 3,443, ಕೃಷ್ಣರಾಜದಲ್ಲಿ 2,940, ಚಾಮರಾಜದಲ್ಲಿ 3,210, ನರಸಿಂಹರಾಜದಲ್ಲಿ 4,944, ವರುಣಾದಲ್ಲಿ 4,245 ಹಾಗೂ ತಿ.ನರಸೀಪುರದಲ್ಲಿ 3,481 ಯುವ ಮತದಾರರಿದ್ದಾರೆ. ಅತಿ ಕಡಿಮೆ (2,940) ಇರುವುದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ.

ಮತದಾನ ಮಾಡಿಸಲು ಕ್ರಮ

ಪ್ರತಿ ಮತವೂ ಅಮೂಲ್ಯವಾದುದು. ಹೀಗಾಗಿ, ವಯೋಸಹಜ ಕಾರಣದಿಂದ ಹಾಸಿಗೆ ಹಿಡಿದಿರುವವರಿದ್ದರೆ ಅವರಿಂದಲೂ ಮತದಾನ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.

–ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT