ಮೈಸೂರು: ಇಲ್ಲಿನ ಪರಿವರ್ತನಾ ಬಿಸಿನೆಸ್ ಶಾಲೆಯಲ್ಲಿ ಅಭ್ಯುದಯ–2026 ಕಾರ್ಯಕ್ರಮ ಶುಕ್ರವಾರ ಆಯೋಜಿಸಲಾಗಿತ್ತು.

ಅಭ್ಯುದಯ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ನಾವೀನ್ಯತೆ, ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ವ್ಯಾವಹಾರಿಕ ನೈಪುಣ್ಯದ ಜೊತೆಗೆ ಅಭಿವೃದ್ಧಿ ಪಡಿಸಿಕೊಳ್ಳಲು ಪ್ರೇರೇಪಿಸಲಾಯಿತು.

ಆಹಾರ, ಉಡುಪುಗಳು, ಆಟಗಳ ಮಳಿಗೆಗಳು ಇದ್ದವು. ಸೃಜನಾತ್ಮಕ ಉದ್ಯಮಿಕ ಚಟುವಟಿಕೆ ಒಳಗೊಂಡ ವಿವಿಧ ಉತ್ಪನ್ನಗಳು ಮತ್ತು ಸೇವೆಗಳು ಪ್ರದರ್ಶಿಸಲ್ಪಟ್ಟವು.

ಸಂಸ್ಥೆಯ ಅಧ್ಯಕ್ಷ ಎಂ.ಪುಟ್ಟೇಗೌಡ, ನಿರ್ವಹಣಾ ಟ್ರಸ್ಟಿ ಬಿ.ವಿ.ಕುಮಾರ್, ನಿರ್ವಹಣಾ ನಿರ್ದೇಶಕ ಮಂಜುರಾಂ ಪುಟ್ಟೇಗೌಡ, ಟ್ರಸ್ಟಿ ಧನಂಜಯ ಕೆ.ಬಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಓಂ ಶ್ರೀನಿಕೇತನ ಟ್ರಸ್ಟ್ನ ಅಕಾಡೆಮಿಕ್ ನಿರ್ದೇಶಕ ಪ್ರೊ.ಎನ್.ರಾಮು, ಪರಿವರ್ತನಾ ಕಾನೂನು ಕಾಲೇಜಿನ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ ಶೈಕ್ಷಣಿಕ ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿಗಳಾಗಿ ಡಾ.ಐಶ್ವರ್ಯಾ ರಾಧಾಕೃಷ್ಣ, ಮದರ್ಹುಡ್ ಆಸ್ಪತ್ರೆ ಮತ್ತು ಅಕ್ಷಯ ಪ್ರಾಪರ್ಟೀಸ್ ನಿರ್ದೇಶಕ ಸಚಿನ್ ಮಂಜುನಾಥ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಜಿ.ರಘುನಂದನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.