ಮೈಸೂರು: ಇಲ್ಲಿನ ಗುಂಡೂರಾವ್ ನಗರದ ಬಳಿ ಶನಿವಾರ ರಾತ್ರಿ ಮೈಸೂರು– ನಂಜನಗೂಡು ರಸ್ತೆಯನ್ನು ದಾಟುತ್ತಿದ್ದ ವಿದ್ಯಾರಣ್ಯಪುರಂನ ಪೌರಕಾರ್ಮಿಕರ ಕಾಲೊನಿ ನಿವಾಸಿ ಸುಬ್ರಹ್ಯಣ್ಯ (56) ಅವರ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇವರು ಪೆಟ್ರೊಲ್ ಬಂಕ್ ಸಮೀಪದಿಂದ ಗುಂಡೂರಾವ್ನಗರಕ್ಕೆ ರಸ್ತೆ ದಾಟುತ್ತಿದ್ದಾಗ ಮೈಸೂರಿನಿಂದ ನಂಜನಗೂಡಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ನಂತರ, ಇವರ ಮೇಲೆ ಬಸ್ ಸಂಪೂರ್ಣ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಇವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷಾಂತರ ಹಣದೊಂದಿಗೆ ವ್ಯಕ್ತಿ ನಾಪತ್ತೆ

ಮೈಸೂರು: ಅಂಗಡಿಯ ಮಾಲೀಕ ಚನ್ನಪಟ್ಟಣದ ಮಾವಿನಹಣ್ಣಿನ ವ್ಯಾಪಾರಿಗೆ ತಲುಪಿಸಲು ನೀಡಿದ್ದ ₹ 3 ಲಕ್ಷ ಹಣದೊಂದಿಗೆ ಇಲ್ಲಿನ ಹಳ್ಳದಕೇರಿ ನಿವಾಸಿ ದಿನೇಶ್ ನಾಪತ್ತೆಯಾಗಿದ್ದಾರೆ. ಈ ಕುರಿತು ಇವರ ಪತ್ನಿ ಲಷ್ಕರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶುಕ್ರವಾರ ಹಣದೊಂದಿಗೆ ಹೊರಟವರು ರಾತ್ರಿ 11ರವರೆಗೂ ಮೊಬೈಲ್ನಲ್ಲಿ ಪತ್ನಿ ಜತೆ ಸಂಪರ್ಕದಲ್ಲಿದ್ದರು. ನಂತರ, ಮೊಬೈಲ್ ಸ್ವಿಚ್ ಆಫ್ ಆಗಿದೆ. ಗುಜರಾತ್ ಮೂಲದವರಾದ ಇವರು ಬಂಧುಗಳ ಮನೆಗೂ ಹೋಗಿಲ್ಲ. ಹಣದೊಂದಿಗೆ ಹೋಗಿರುವುದರಿಂದ ನಾಪತ್ತೆ ಕುರಿತು ಸಂಶಯ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.