ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪರಿಸರ ತಾಣದ ದೇವಸ್ಥಾನ ಉಳಿಸಿ- ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ವೀರಾಂಜನೇಯ ದೇವಾಲಯದಲ್ಲಿ ಶ್ರೀರಾಮತಾರಕ, ಪವಮಾನ ಹೋಮ
Published 13 ಸೆಪ್ಟೆಂಬರ್ 2023, 7:15 IST
Last Updated 13 ಸೆಪ್ಟೆಂಬರ್ 2023, 7:15 IST
ಅಕ್ಷರ ಗಾತ್ರ

ಮೈಸೂರು: ‘ಪರಿಸರ ತಾಣದಲ್ಲಿರುವ ದೇವಸ್ಥಾನ ಉಳಿಸುವುದರ ಮೂಲಕ ಆಚರಣೆಗಳನ್ನು ನಡೆಸಿಕೊಂಡು ಬರುವಂತೆ ಆಸ್ತಿಕರು ಮುಂದಾಗಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೇವಾಭಕ್ತ ಮಂಡಳಿಯಿಂದ ಲೋಕಕಲ್ಯಾಣಾರ್ಥಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮತಾರಕ ಮತ್ತು ಪವಮಾನ ಹೋಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಅರಮನೆ ಮುಂಭಾಗ ಇಂದಿಗೂ ಹಳೆ ಮೈಸೂರು ಇತಿಹಾಸದ ಪಾರಂಪರಿಕ ವಾತಾವರಣವಿದೆ. ಇಂತಹ ಪರಿಸರದಲ್ಲಿರುವ ಧಾರ್ಮಿಕ ಆಧ್ಯಾತ್ಮಿಕ ತಾಣಗಳಲ್ಲಿ ದೈನಂದಿನ ನಿತ್ಯಪೂಜೆ, ಧ್ಯಾನ, ಪ್ರದಕ್ಷಿಣೆ, ಪ್ರಾರ್ಥನೆ, ವ್ಯಾಯಾಮದಿಂದಾಗಿ ವೈಜ್ಞಾನಿಕವಾಗಿಯೂ ಆರೋಗ್ಯ ವೃದ್ಧಿಯಾಗುತ್ತದೆ’ ಎಂದರು.

ಮುಖಂಡ ಕೌಟಿಲ್ಯ ರಘು ಮಾತನಾಡಿ, ‘ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳು, ಮದುವೆ ನಾಮಕರಣ ಶುಭ ಸಮಾರಂಭಗಳು ವೀರಾಂಜನೇಯ ದೇವಸ್ಥಾನದಲ್ಲಿ ನಡೆದುಕೊಂಡು ಬಂದಿದೆ. ಮತ್ತೊಮ್ಮೆ ಪ್ರವಾಸೋದ್ಯಮ ಇಲಾಖೆ ಅಂತಹ ಆಚರಣೆಗಳಿಗೆ ಅವಕಾಶ ಕೊಟ್ಟರೆ ಬಡಜನರಿಗೆ ಉಪಯೋಗವಾಗುತ್ತದೆ’ ಎಂದರು

ವೀರಾಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ತುಳಸಿ ಅಲಂಕಾರ, ಹನುಮಾನ್ ಚಾಲೀಸ್ ಪಾರಾಯಣ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನಡೆಯಿತು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಜೇಶ್ ಜಿ.ಗೌಡ, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಫನ್ ವರ್ಲ್ಡ್ ಮುಖ್ಯಸ್ಥರಾದ ಮಲ್ಲಿಕಾರ್ಜುನ, ಅಂಬಾರಿ ಪುರೋಹಿತ ಪ್ರಹ್ಲಾದರಾವ್, ಮುಡಾ ಸದಸ್ಯೆ ಲಕ್ಷ್ಮಿದೇವಿ, ಕೆ.ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಪಳನಿ ರಾಜೇಶ್, ವಿನಯ್ ಕಣಗಾಲ್, ಸುಚೀಂದ್ರ, ಭೈರತಿ ಲಿಂಗರಾಜು, ಪಣೀಶ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ವಿಘ್ನೇಶ್ವರ ಭಟ್, ಶ್ರೀನಿವಾಸ್, ರಂಗನಾಥ್, ವಿಜಯ್ ಕುಮಾರ್, ಪ್ರಶಾಂತ್ ಸದಾಶಿವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT