ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಆಷಾಢ ವಿಶೇಷ ಪೂಜೆ

Published 14 ಜುಲೈ 2023, 13:01 IST
Last Updated 14 ಜುಲೈ 2023, 13:01 IST
ಅಕ್ಷರ ಗಾತ್ರ

ನಂಜನಗೂಡು: ನಗರದ ಕಪಿಲಾನದಿ ತೀರದ ಚಾಮುಂಡೇಶ್ವರಿ ದೇವಾಲಯದಲ್ಲಿ ಕೊನೆಯ ಆಷಾಢ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜಾ ಕೈಕಂರ್ಯ ನಡೆಯಿತು. ದೇವಿಯ ದರ್ಶನ ಪಡೆಯಲು ಅಪಾರ ಭಕ್ತರ ಭಾಗಿಯಾದರು.

ಮುಂಜಾನೆ 4 ಗಂಟೆಗೆ ದೇವಾಲಯದ ಪ್ರಧಾನ ಅರ್ಚಕ ವೈದ್ಯನಾಥ ದೀಕ್ಷಿತ್ ನೇತೃತ್ವದಲ್ಲಿ ದೇವಿಗೆ ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು.

ಮಹಾಮಂಗಳಾರತಿ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತು. ಬೆಳಿಗ್ಗೆಯಿಂದಲೇ ದೇವಾಲಯದ ಮುಂಭಾಗ ಭಕ್ತರು ತುಂತುರು ಮಳೆ ಲೆಕ್ಕಿಸದೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿಗೆ ಜಯಘೋಷ ಕೂಗಿ ದರ್ಶನ ಪಡೆದು ಪುನೀತರಾದರು.

ಚಾಮುಂಡೇಶ್ವರಿ ದೇವಿಗೆ ವಿವಿಧ ಬಗೆಯ ಬಣ್ಣ, ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ನಾಗಾಭರಣ ಅಲಂಕಾರ, ಮುತ್ತಿನ ಅಲಂಕಾರ, ಶೇಷವಾಹನ ಅಲಂಕಾರ ಮಾಡಿದರೆ, ಉತ್ಸವಮೂರ್ತಿಗೆ ಸಿಂಹ ವಾಹನ ಅಲಂಕಾರ ಮಾಡಲಾಗಿತ್ತು. ದೇವಿಯ ಮೂರ್ತಿಯನ್ನು ವಿಶೇಷವಾಗಿ ಅಲಂಕಾರವನ್ನು ಕಂಡ ಭಕ್ತರು ಕಣ್ತುಂಬಿಕೊಂಡು ಧನ್ಯತಾಭಾವದಿಂದ ಭಾವ ಪರವಶರಾದರು.

ದೇವಾಲಯದ ಮುಂಭಾಗದಲ್ಲಿ ಮಹಿಳೆಯರು ದೀಪ ಹಚ್ಚಿ, ಬಾಗಿನ ವಿನಿಮಯ ಮಾಡಿಕೊಂಡು ಇಷ್ಟಾರ್ಥ ನೆರವೇರಿಸುವಂತೆ ಚಾಮುಂಡೇಶ್ವರಿ ದೇವಿ ಪ್ರಾರ್ಥಿಸಿದರು.

ದೇವಾಲಯದ ಭಕ್ತ ಮಂಡಳಿಯಿಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT