ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ಮೈಸೂರಿನ ಇಬ್ಬರ ಸಾಧನೆ

Last Updated 25 ಮೇ 2019, 12:00 IST
ಅಕ್ಷರ ಗಾತ್ರ

ಮೈಸೂರು: ‘ಸಿಇಟಿ’ ಫಲಿತಾಂಶದಲ್ಲಿ ಮೈಸೂರಿನ ಇಬ್ಬರು ವಿದ್ಯಾರ್ಥಿಗಳು ಟಾಪ್ 10 ಒಳಗೆ ರ‍್ಯಾಂಕ್ ಗಳಿಸಿದ್ದಾರೆ.

ನಗರದ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿ ವಿ.ವಾಸುದೇವ ಅವರು ಯೋಗ ವಿಜ್ಞಾನದಲ್ಲಿ 2ನೇ ರ‍್ಯಾಂಕ್‌ ಪಡೆಸಿದ್ದಾರೆ. ಜತೆಗೆ, ಔಷಧ ವಿಜ್ಞಾನದಲ್ಲಿ 7ನೇ, ಬಿಎಸ್ಸಿ ಕೃಷಿ ವಿಜ್ಞಾನದಲ್ಲಿ 13ನೇ, ಪಶು ವಿಜ್ಞಾನದಲ್ಲಿ 4ನೇ, ಬಿ-ಫಾರ್ಮ ಹಾಗೂ ಡಿ-ಫಾರ್ಮಾದಲ್ಲಿ 7ನೇ ರ‍್ಯಾಂಕ್ ಪಡೆದಿದ್ದಾರೆ‌.

‘ಫಲಿತಾಂಶ ಸಂತಸ ನೀಡಿದೆ. ನಾನು ನೀಟ್‌ ಫಲಿತಾಂಶಕ್ಕಾಗಿ ಕಾದಿದ್ದೇನೆ. ವೈದ್ಯಕೀಯ ಶಿಕ್ಷಣ ಪಡೆಯುವುದು ಆಸೆಯಾಗಿದೆ’ ಎಂದು ವಾಸುದೇವ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಕೃಷ್ಣ ವಿದ್ಯಾಶಾಲೆ ಪಿಯು ಕಾಲೇಜಿನ ವಿದ್ಯಾರ್ಥಿ ರೋಹಿತ್ ರಾಜ್ ಅವರು ಬಿಎಸ್ಸಿ ಕೃಷಿ ವಿಜ್ಞಾನದಲ್ಲಿ 6ನೇರ‍್ಯಾಂಕ್ ಪಡೆದಿದ್ದಾರೆ. ಇವರು ಕೃಷಿ ವಿಜ್ಞಾನದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (http://kea.kar.nic.in) ಸೇರಿಂದಂತೆhttp://cet.kar.nic.in,http://karresults.nic.inವೆಬ್‌ಸೈಟ್‌ಗಳಲ್ಲೂ ಫಲಿತಾಂಶ ನೋಡಬಹುದು.

ಈ ಬಾರಿ 1.90 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದು, ಶೇ 92ರಷ್ಟು ಮಂದಿ ಪರೀಕ್ಷೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT