ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಫಲಿತಾಂಶ: ಎಲ್ಲ ವಿಭಾಗಗಳಲ್ಲೂ ಮೈಸೂರು ಪ್ರಥಮ

ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದವರು 10,431 ಮಂದಿ, ಎಚ್‌.ಕೆ. ಮೇಘನ್‌ ದಾಖಲೆ
Last Updated 21 ಸೆಪ್ಟೆಂಬರ್ 2021, 5:27 IST
ಅಕ್ಷರ ಗಾತ್ರ

ಮೈಸೂರು: ವೃತ್ತಿಪ‍ರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಜಿಲ್ಲೆಯು ಉತ್ತಮ ಸಾಧನೆ ಮಾಡಿದೆ. ಎಲ್ಲ 5 ವಿಭಾಗಗಳಲ್ಲೂ ಇಲ್ಲಿನ ಪ್ರಮಥಿ ಹಿಲ್‌ ವ್ಯೂ ಅಕಾಡೆಮಿ ವಿದ್ಯಾರ್ಥಿ ಎಚ್.ಕೆ.ಮೇಘನ್ ಅವರು ಪ್ರಥಮ ಸ್ಥಾನ ಗಳಿಸುವ ಮೂಲಕ ಇತಿಹಾಸ ಬರೆದಿದ್ದಾರೆ.

ಈತ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವವಿಜ್ಞಾನ ವಿಷಯಗಳಲ್ಲಿ 59 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ರ್‍ಯಾಂಕ್ ಗಳಿಸಿ ದಾಖಲೆ
ನಿರ್ಮಿಸಿದ್ದಾನೆ.

ಮೇಘನ್ ಹಾಗೂ ಅವರ ತಾಯಿ ಲೀಲಾವತಿ ಅವರನ್ನು ಪ್ರಮಥಿ ಹಿಲ್‌ ವ್ಯೂ ಅಕಾಡೆಮಿಯಲ್ಲಿ ಸೋಮವಾರ ಆಹ್ವಾನಿಸಲಾಯಿತು. ಮೇಘನ್‌ಗೆ ಅಕಾಡೆಮಿ ಅಧ್ಯಕ್ಷ ಎಚ್.ವಿ.ರಾಜೀವ್ ಸನ್ಮಾನಿಸಿ, ಸಿಹಿ ಹಂಚಿದರು. ಪ್ರಾಂಶುಪಾಲರಾದ ಸುದರ್ಶನ, ಸುನಿಲ್‌ ದಯಾಕರ್, ಖಜಾಂಚಿ ಫಣಿರಾಜ್, ಮೇಘನ್ ಅವರ ತಾಯಿ ಲೀಲಾವತಿ, ಮೇಘನ್, ಸಂಯೋಜಕ ನಾಗರಾಜು ಇದ್ದರು.

ಸಿಇಟಿ ಪಡೆದುಕೊಂಡವರು 10 ಸಾವಿರಕ್ಕೂ ಅಧಿಕ ಮಂದಿ: ವೃತ್ತಿಪ‍ರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಜಿಲ್ಲೆಯಲ್ಲಿ 10,431 ಮಂದಿ ಬರೆದಿದ್ದರು. ಇವರಲ್ಲಿ ಭೌತವಿಜ್ಞಾನ ಪರೀಕ್ಷೆಗೆ 389 ಮತ್ತು ರಸಾಯನ ವಿಜ್ಞಾನ ಪರೀಕ್ಷೆಗೆ 392 ವಿದ್ಯಾರ್ಥಿಗಳು ಗೈರಾಗಿದ್ದರು. ಜೀವಿವಿಜ್ಞಾನ ವಿಷಯದಲ್ಲಿ 2,019 ಹಾಗೂ ಗಣಿತ ವಿಷಯದಲ್ಲಿ 524 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯಲ್ಲಿ 28 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ವಿದ್ಯಾರ್ಥಿಗಳೆಲ್ಲರೂ ಆನ್‌ಲೈನ್‌ ಮೂಲಕ ಫಲಿತಾಂಶ ಪಡೆದಿದ್ದಾರೆ.

ಮುಂದಿನ ಹಂತದಲ್ಲಿ ಕೌನ್ಸಿಲಿಂಗ್ ನಡೆಯಲಿದ್ದು, ವಿದ್ಯಾರ್ಥಿಗಳು ತಮಗೆ ಬೇಕಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಡಿಡಿಪಿಯು ಶ್ರೀನಿವಾಸಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT