ಮೈಸೂರು: ಗೋಮಾಂಸದ ರಫ್ತು ಪ್ರಮಾಣವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಂಗಳವಾರ ಇಲ್ಲಿ ಆರೋಪಿಸಿದರು.

‘ನಮ್ಮ ದೇಶದಿಂದ ಗೋಮಾಂಸ ರಫ್ತುಮಾಡುವವರಲ್ಲಿ ಮೇಲ್ವರ್ಗದವರು, ಬ್ರಾಹ್ಮಣರೇ ಹೆಚ್ಚು ಇದ್ದಾರೆ ಎಂಬುದನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಇಲ್ಲಿ ಗೋಹತ್ಯೆ ನಿಲ್ಲಿಸಿ ಹೊರ ದೇಶಗಳಿಗೆ ರಫ್ತು ಪ್ರಮಾಣ ಹೆಚ್ಚಿಸುವ ಹುನ್ನಾರ, ಇದೆ ಹಿಂದೆ ಅಡಗಿದೆ. ಇದು ಸರಿಯಾದ ಕ್ರಮ ಅಲ್ಲ’ ಎಂದರು.

‘ರೈತರು ಅನುಪಯುಕ್ತವಾದ ದನ, ಎಮ್ಮೆ, ಇತರ ಜಾನುವಾರುಗಳನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಅದು ಆರ್ಥಿಕವಾಗಿ ಹೊರೆಯಾಗುತ್ತದೆ. ಅದನ್ನು ಸಾಕುವುದು ಕಷ್ಟ. ಆದ್ದರಿಂದ ಅವುಗಳನ್ನು ಮಾರಾಟ ಮಾಡುವರು. ಜಾನುವಾರುಗಳ ವಿಚಾರದಲ್ಲಿ ಹಳ್ಳಿಯ ರೈತರು ಯಾವುದೇ ಭಾವುಕವಾದ ವಿಚಾರಗಳನ್ನು ಇಟ್ಟುಕೊಂಡಿಲ್ಲ. ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.