ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ಸಿದ್ದರಾಮಯ್ಯ ಸಹಿ ನಕಲು: ರಾಜ್ಯಪಾಲರಿಗೆ ಮತ್ತೊಂದು ದೂರು

Published : 24 ಆಗಸ್ಟ್ 2024, 23:30 IST
Last Updated : 24 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನು ಬೇರೆಯವರು ನಕಲು ಮಾಡಿದ್ದಾರೆ’ ಎಂದು ಆರೋಪಿಸಿರುವ ಇಲ್ಲಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ‘ಈ ಬಗ್ಗೆ ಲೋಕಾಯುಕ್ತರಿಂದ ತನಿಖೆ ಮಾಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ಇದರೊಂದಿಗೆ ಅವರು ಮುಖ್ಯಮಂತ್ರಿ ವಿರುದ್ಧ ಮತ್ತೊಂದು ದೂರು ಸಲ್ಲಿಸಿದಂತಾಗಿದೆ.

ಶನಿವಾರ ದೂರು ಸಲ್ಲಿಸಿರುವ ಅವರು, ‘ಮುಖ್ಯಮಂತ್ರಿಯು ಕನ್ನಡದಲ್ಲಿ ಸಹಿ ಮಾಡುವುದು ಸಾಮಾನ್ಯ. ಸಾಕಷ್ಟು ಸರ್ಕಾರಿ ದಾಖಲೆಗಳಲ್ಲಿ ಕನ್ನಡದಲ್ಲಿ ಸಹಿ ಇರುವುದನ್ನು ಗಮನಿಸಿದ್ದೇನೆ. ಆದರೆ, ಮುಡಾ ಹಗರಣ ಸಂಬಂಧ ರಾಜ್ಯಪಾಲರಿಗೆ ಬರೆದಿರುವ ಪತ್ರ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಿದ ಆಸ್ತಿ ವಿವರದ ಪ್ರಮಾಣಪತ್ರದಲ್ಲಿ ಅವರ ಸಹಿ ಇಂಗ್ಲಿಷ್‌ ನಲ್ಲಿದೆ. ಅದು ನಕಲು ಆಗಿದ್ದು, ಬೇರೆ ಯಾರೋ ಸಹಿ ಮಾಡಿದ್ದಾರೆ. ಆದ್ದರಿಂದ ಅದನ್ನು ಗಮನಿಸಿ ಸಾಂವಿಧಾನಿಕ ಹುದ್ದೆಯ ಗೌರವ ಕಾಪಾಡಬೇಕು’ ಎಂದು ಕೋರಿದ್ದಾರೆ. ದೂರಿನೊಂದಿಗೆ ಆರು ದಾಖಲೆಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT