ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ

Last Updated 8 ಫೆಬ್ರುವರಿ 2023, 13:04 IST
ಅಕ್ಷರ ಗಾತ್ರ

ಹನಗೋಡು: ಹೋಬಳಿಯ ದಾಸನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ನೂತನ ಸಂಘವನ್ನು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಟಿ.ಹರೀಶ್ ಗೌಡ ಬುಧವಾರ ಉದ್ಘಾಟಿಸಿದರು.

ನಂತರ ಮಾತನಾಡಿ, ‘ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುವವರ ಪರಿಸ್ಥಿತಿ ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಹೈನುವಾರಿಕೆ ನೆರವಾಗಲಿದೆ. ಹೈನುಗಾರಿಕೆಯು ಬಹಳ ದೊಡ್ಡ ಉದ್ಯಮವಾಗಿ ಬೆಳೆದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. ಹೈನುಗಾರಿಕೆಯಿಂದ ಆದಾಯ ಕಾಣಬಹುದಾಗಿದೆ. ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮೈಮುಲ್ ನಿರ್ದೇಶಕ ಕೊಂಡವಾಡಿ ಕೆ.ಎಸ್.ಕುಮಾರ್ ಮಾತನಾಡಿ, ‘ಸರ್ಕಾರವು ಹಾಲು ಉತ್ಪಾದಕರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಮೈಮುಲ್ ನಿರ್ದೇಶಕಿ ಶಿವಗಾಮಿ, ಕೆಎಂಎಫ್ ವ್ಯವಸ್ಥಾಪಕ ಕರಿಬಸವಯ್ಯ, ಮುಖಂಡರಾದ ಮುಖಂಡ ಕಟ್ಟನಾಯ್ಕ, ಕಿರಂಗೂರು ಬಸವರಾಜ್, ಮುದಗನೂರು ಸುಭಾಷ್, ದಾ.ರಾ.ಮಹೇಶ್, ಗ್ರಾ.ಪಂ. ಅಧ್ಯಕ್ಷೆ ನಿರ್ವಾಣಿ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಿ.ಶಿವರಾಜ್, ಕಾರ್ಯದರ್ಶಿ ಉಷಾ ಬೀರಪ್ಪ, ಉಪಾಧ್ಯಕ್ಷೆ ರಾಜಮ್ಮ, ನಿರ್ದೇಶಕರಾದ ಪ್ರಕಾಶ್, ಪಿ.ರಮೇಶ್, ಡಿ.ಮಾದೇಗೌಡ, ಪುಟ್ಟೇಗೌಡ, ಬೀರಪ್ಪ, ಚಂದ್ರಕಲಾ, ನಂಜಯ್ಯ, ಶಂಕರ್, ವಿಸ್ತರಣಾಧಿಕಾರಿ ಗೌತಮ್ ವಿಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT