ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಕಾನ್‌ನಲ್ಲಿ ದಸರಾ ಉತ್ಸವ ನಾಳೆ

Last Updated 4 ಅಕ್ಟೋಬರ್ 2022, 6:14 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಜಯನಗರದ ಇಸ್ಕಾನ್‌ನಲ್ಲಿ 13ನೇ ವಾರ್ಷಿಕ ‘ಇಸ್ಕಾನ್ ದಸರಾ ಉತ್ಸವ’ವನ್ನು ಅ.5ರಂದು ಹಮ್ಮಿಕೊಳ್ಳಲಾಗಿದೆ.

ಆಚರಣೆಯು ಸಂಜೆ 6ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಕೃಷ್ಣ–ಬಲರಾಮನನ್ನು ರಾಮ–ಲಕ್ಷ್ಮಣರನ್ನಾಗಿ ಅಲಂಕರಿಸ ಲಾಗುತ್ತದೆ. ಇಸ್ಕಾನ್ ಬೆಂಗಳೂರು ಅಧ್ಯಕ್ಷ ಹಾಗೂ ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ್ ದಸರಾ ಕುರಿತು ವಿಶೇಷ ಪ್ರವಚನ ನೀಡಲಿದ್ದಾರೆ. ಬಳಿಕ ಕೃಷ್ಣ–ಬಲರಾಮರ ಪಲ್ಲಕ್ಕಿ ಉತ್ಸವವನ್ನು ಭಕ್ತರ ಸಂಕೀರ್ತ ನೆಯೊಂದಿಗೆ ನಡೆಸಲಾಗುತ್ತದೆ.

ದುಷ್ಟರ ವಿರುದ್ಧದ ಸತ್ಯದ ವಿಜಯವನ್ನು ಗುರುತಿಸಲು 15 ಅಡಿ ಎತ್ತರದ ರಾವಣ ಮತ್ತು ಕುಂಭಕರ್ಣರ ಪ್ರತಿಕೃತಿಗಳನ್ನು ಸುಡುವುದು ಹಬ್ಬದ ವಿಶೇಷ ಆಕರ್ಷಣೆಯಾಗಿದೆ. ವರ್ಣರಂಜಿತ ಪಟಾಕಿಗಳೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಇಸ್ಕಾನ್ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT