ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪ್ಪ ಸಚಿವ ಸ್ಥಾನಕ್ಕೆ ಡಿಕೆಶಿ ಅಡ್ಡಗಾಲು: ದೇವಗಳ್ಳಿ ಸೋಮಶೇಖರ್ ಆರೋಪ

Published 25 ಮೇ 2023, 5:32 IST
Last Updated 25 ಮೇ 2023, 5:32 IST
ಅಕ್ಷರ ಗಾತ್ರ

ಮೈಸೂರು: ‘ಡಾ.ಎಚ್.ಸಿ.ಮಹದೇವಪ್ಪ ಸಚಿವರಾಗಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಡ್ಡಗಾಲಾಗಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಮಿತಿ ಮುಖಂಡ ದೇವಗಳ್ಳಿ ಸೋಮಶೇಖರ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಗಳ್ಳಿ ಸೋಮಶೇಖರ್, ‘ಮಹದೇವಪ್ಪ ಅವರು ದಲಿತರನ್ನು ಕಾಂಗ್ರೆಸ್ ಪರ ಒಗ್ಗೂಡಿಸಿದ ಪರಿಣಾಮ ಕಾಂಗ್ರೆಸ್‌ ಇಂದು ಅಧಿಕಾರ ಹಿಡಿದಿದೆ. ಡಿ.ಕೆ.ಶಿವಕುಮಾರ್‌ ಅವರ ಮುಖ ನೋಡಿ ನಾವು ಮತ ಹಾಕಿಲ್ಲ. ದಲಿತರನ್ನು ಕೇವಲ ಏಣಿಯಾಗಿಸಿಕೊಂಡಿರುವ ಕೆಲವರು ಅಡ್ಡಗಾಲು ಹಾಕುವುದು ಸರಿಯಲ್ಲ’ ಎಂದು ಹರಿಹಾಯ್ದರು.

‘ಶೇ 76ರಷ್ಟು ದಲಿತ ಸಮುದಾಯದವರು ಕಾಂಗ್ರೆಸ್‍ಗೆ ಮತ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮಹದೇವಪ್ಪ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಪಕ್ಷದ ವರಿಷ್ಠರು ಶೀಘ್ರದಲ್ಲೇ ಒಪ್ಪಿಗೆ ನೀಡಬೇಕು’ ಎಂದು ಆಗ್ರಹಿಸಿದರು.

‘ಒಕ್ಕಲಿಗರಿಗೆ ಇಷ್ಟು, ಲಿಂಗಾಯತರಿಗಿಷ್ಟು ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್‍ನ ನಿಷ್ಠಾವಂತ ಮತ ಬ್ಯಾಂಕ್ ಆಗಿರುವ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಸಮುದಾಯಗಳನ್ನು ಲೆಕ್ಕಾಚಾರದಿಂದ ಹೊರಗಿಡಲಾಗುತ್ತಿದೆ. ಕನಿಷ್ಠ 8ರಿಂದ 10 ಸಚಿವ ಸ್ಥಾನ ದಲಿತರಿಗೆ ನೀಡಲೇಬೇಕು’ ಎಂದು ಒತ್ತಾಯಿಸಿದರು.

ದಸಂಸ ಮುಖಂಡರಾದ ಬೆಲವತ್ತ ರಾಮಚಂದ್ರ, ಜವರಪ್ಪ ಅಹಿಂದ, ಜೋಗಿ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT