ಮೈಸೂರು: ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಮಾದಕ ದ್ರವ್ಯ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ‘ಹಿರೋ’ ಎಂಬ ಹೆಸರಿನ ಲ್ಯಾಬ್ರಡಾರ್ ತಳಿಯ ಶ್ವಾನವು ಶುಕ್ರವಾರ ವಯೋ ಸಹಜ ಕಾಯಿಲೆಗಳಿಂದ ನಿಧನವಾಯಿತು.

ತರಬೇತಿ ಪಡೆದ ಈ ಶ್ವಾನವು 2011ರ ಏಪ್ರಿಲ್ 4ರಂದು ಇಲಾಖೆಗೆ ಸೇರಿತ್ತು. ಹಲವು ಶ್ವಾನ ಪ್ರದರ್ಶನಗಳು ಹಾಗೂ ಅಣಕು ಕಾರ್ಯಾಚರಣೆಗಳಲ್ಲಿ ಈ ಶ್ವಾನವು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿತ್ತು. ಬಿ.ಎಸ್.ಸುನಿಲ್‌ಕುಮಾರ್ ಅವರು ಇದರ ತರಬೇತುದಾರರಾಗಿದ್ದರು.

ಈ ಶ್ವಾನವು ಇಲಾಖೆಯಲ್ಲಿ ಸುಮಾರು 10 ವರ್ಷ 12 ದಿನಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿತ್ತು. ನಂತರ, ಇದು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿತ್ತು.

ಇದರ ಪಾರ್ಥೀವಶರೀರಕ್ಕೆ ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಶಿವರಾಜು ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಶ್ವಾನದಳದ ಉಸ್ತುವಾರಿ ಅಧಿಕಾರಿಗಳಾದ ಕೆ.ಎಂ.ಮೂರ್ತಿ, ಸೋಮಣ್ಣ, ಸುರೇಶ್ ಹಾಗೂ ಶ್ವಾನದಳದ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.